Belagavi News In Kannada | News Belgaum

ವಿಷೇಶ ಚೇತನರ ಮತ ಅಮೂಲ್ಯ : ರವಿ ಬಂಗಾರಪ್ಪನವರ

ವಿಷೇಶ ಚೇತನರ ಮತ ಅಮೂಲ್ಯ : ರವಿ ಬಂಗಾರಪ್ಪನವರ

ಬೆಳಗಾವಿ, ಮಾ.28 : ತಾಲ್ಲೂಕಿನಲ್ಲಿ ಕಡೆಮೆ ಮತದಾನವಾಗಿರುವ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣ ಮತದಾನವಾಗುವಂತೆ ವಿಷೇಶ ಚೇತನರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ ಹೇಳಿದರು.
ನಗರದ ತಾಲ್ಲೂಕ ಪಂಚಾಯತ ಕಾರ್ಯಾಲಯದಲ್ಲಿ ಮಂಗಳವಾರ ಮಾರ್ಚ 28 ರಂದು ಜಿಲ್ಲಾ ಹಾಗೂ ತಾಲ್ಲೂಕ ಪಂಚಾಯತಿ ವತಿಯಿಂದ ಆಯೋಜಿಸಿದ್ದ ವಿಷೇಶ ಚೇತನರಿಗೆ ಮತದಾನ ಜಾಗೃತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ವಿಷೇಶ ಚೇತನರ ಮತ ಅತೀ ಅಮೂಲ್ಯವಾದುದು ಆದ್ದರಿಂದ ಮತದಾನದಿಂದ ಯಾರು ವಂಚಿತರಾಗದೆ ಎಲ್ಲ ವಿಷೇಶ ಚೇತನರು ಮತದಾನ ಮಾಡಬೇಕು. ವಿಷೇಶ ಚೇತನರಿಗೆ ಮತಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೈಕ್ ಜಾಥಾ, ಕಾಲು ನಡೇಗೆ ಜಾಥಾ ಸೇರಿದಂತೆ ಇತರ ವಿಷೇಶ ಜಾಥಾಗಳನ್ನು ಆಯೋಜಿಸುವ ಮೂಲಕ ವಿಷೇಶ ಚೇತನರಿಗೆ ಮತ್ತು ಸಾರ್ವಜನಿಕರಿಗೆ ಮತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತಿಳಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ ಅವರು ಸ್ವಾಗತಿಸಿ ವಂದಿಸಿದರು. ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಗಣೇಶ ಕೆ.ಎಸ್., ಜಿಲ್ಲಾ ಐಇಸಿ ಸಂಯೋಜಕರಾದ ಪ್ರಮೋದ ಗೋಡೆಕರ್, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕರಾದ ಬಾಹುಬಲಿ ಮೆಳವಂಕಿ ತಾಲ್ಲೂಕು ಐಇಸಿ ಸಂಯೋಕರಾದ ರಮೇಶ ಮಾದರ ಸೇರಿಂದತೆ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ಇದ್ದರು.////

 

ಮೂಲ ಆಸ್ತಿ ತೆರಿಗೆಯ ಮೊತ್ತದಲ್ಲಿ ಹೆಚ್ಚಳ

ಬೆಳಗಾವಿ, ಮಾ.28 : ಸ್ವಯಂ ಘೋಷಿತ ಆಸ್ತಿ ತೆರಿಗೆಯ ಪದ್ಧತಿಯಡಿಯಲ್ಲಿ 2022-23 ರ ಆರ್ಥಿಕ ವರ್ಷದ ಆಸ್ತಿ ತರಿಗೆ ಲೆಕ್ಕಾಚಾರದಂತೆ ಮೂಲ ಆಸ್ತಿ ತೆರಿಗೆಯ ಮೊತ್ತಕ್ಕೆ 2023-24 ನೇ ಆರ್ಥಿಕ ಸಾಲಿಗೆ ಅನ್ವಯಿಸುವಂತೆ ಶೇಕಡಾವಾರು ಮೊತ್ತವನ್ನು ಆಸ್ತಿ ತೆರಿಗೆಯಲ್ಲಿ ಹೆಚ್ಚಳ ಮಾಡಲಾಗಿರುತ್ತದೆ.
ವಸತಿ ಬಳಕೆಯ ಆಸ್ತಿಗಳಿಗೆ ಶೇ.3, ವಾಣ ಜ್ಯ ಬಳಕೆಯ ಆಸ್ತಿಗಳಿಗೆ ಶೇ.3, ಕೈಗಾರಿಕೆ ಬಳಕೆಯ ಆಸ್ತಿಗಳಿಗೆ ಶೇ.3, ಖಾಲಿ ಜಾಗೆ ಬಳಕೆಯ ಆಸ್ತಿಗಳಿಗೆ ಶೇ.3 ರಷ್ಟು ಹೆಚ್ಚಳವಾಗಿರುತ್ತದೆ.
ಕಾರಣ ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು/ಅನುಭೋಗದಾರರು ಸಕಾಲದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿ ಪುರಸಭೆಯ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಬೇಕು ಎಂದು ಉಗಾರ ಖುರ್ದ ಪುರಸಭೆ ಮುಖ್ಯಾಧಿಕಾರಿಯಾದ ಸುನೀಲ ಎಮ್. ಬಬಲಾದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಜಂಟಿ ಸಾರಿಗೆ ಆಯುಕ್ತರ ಕಚೇರಿ: ತಾತ್ಕಾಲಿಕವಾಗಿ ಸ್ಥಳಾಂತರ

ಬೆಳಗಾವಿ, ಮಾ.28 : ಹೊಸ ಕಟ್ಟಡ ನಿರ್ಮಾಣದ ಹಿನ್ನಲೆಯಲ್ಲಿ ಮಾರ್ಚ.30 2023 ರಿಂದ ತಾತ್ಕಾಲಿಕವಾಗಿ ಈಗಿರುವ ಕಟ್ಟಡದಿಂದ ಜಂಟಿ ಸಾರಿಗೆ ಆಯುಕ್ತರ ಕಚೇರಿ, ಬೆಳಗಾವಿ ವಿಭಾಗ ಇವರ ಕಛೇರಿಯನ್ನು ಸುವರ್ಣಸೌಧ, ಕೊಠಡಿ ಸಂಖ್ಯೆ: 55, ದಕ್ಷಿಣ ಭಾಗ, 1ನೇ ಮಹಡಿ, ಬೆಳಗಾವಿ ಹಾಗೂ ಬೆಳಗಾವಿ ಪ್ರಾದೇಶಿಕ ಸಾರಿಗೆ ಕಛೇರಿಯನ್ನು ಭಾರತ ಸಂಚಾರ ನಿಗಮ ಲಿಮಿಟೆಡ್, ಮುಖ್ಯ ಕಟ್ಟಡ ಟಿ ಆರ್ ಎ ಹಾಲ್ , ಗ್ಲೋಬ್ ಚಿತ್ರ ಮಂದಿರ ಹತ್ತಿರ , ರೇಲ್ವೆ ಸ್ಟೇಶನ್ ರೋಡ, ಬೆಳಗಾವಿ-590001  ಇಲ್ಲಿ ಸ್ಥಳಾಂತರಿಸಿ ಕಾರ್ಯನಿರ್ವಹಿಸಲಾಗುವುದು. ಆದ್ದರಿಂದ ವಾಹನ ಮಾಲೀಕರು ಹಾಗೂ ಸಾರ್ವಜನಿಕರು ಸಹಕರಿಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////