ಬೆಳಗಾವಿ ನಗರದಲ್ಲಿ “ಮತದಾನ ಜಾಗೃತಿ ಜಾಥಾ

ಬೆಳಗಾವಿ, ಮಾ.30 : ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ ಅವರ ಮಾರ್ಗದರ್ಶನದಲ್ಲಿ ಗುರುವಾರ(ಮಾ.30) “ಮತದಾನ ಜಾಗೃತಿ ಜಾಥಾ”ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ (ವ್ಯಾಕ್ಸಿನ ಡಿಪೋ)ಯಿಂದ ಆರ.ಪಿ.ಡಿ. ಕ್ರಾಸ್ ವರೆಗೆ ಸಾಗಿ ಮತದಾನ ಜಾಗೃತಿ ಘೋಷಣೆ ಗಳೊಂದಿಗೆ ಜರುಗಿದ ಜಾಥ ಕಾರ್ಯಕ್ರಮಕ್ಕೆ ರವಿ ಬಂಗಾರಪ್ಪನವರ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಬೆಳಗಾವಿ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಹೇಶ ಕೊಣಿ ಜಿಲ್ಲಾ ಆಯುಷ ಅಧಿಕಾರಿಗಳಾದ ಡಾ. ಶ್ರೀಕಾಂತ ಸುಣದೊಳ್ಳಿ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಂ.ವಿ ಕಿವಡಸನ್ನವರ ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ.ಬಿ.ಎನ ತುಕ್ಕಾರ ಜಿಲ್ಲಾ ಕೀಟ ಜನ್ಯ ಸಾಂಕ್ರಾಮಿಕ ರೋಗಗಳು ನಿಯಂತ್ರಣ ಅಧಿಕಾರಿ ಎಂ.ಎಸ ಪಲ್ಲೇದ ಪ್ರಾಥಮಿಕ ಆರೋಗ್ಯ ಕೇಂದ್ರ ಯಳ್ಳೂರ ವೈಧ್ಯಾಧಿಕಾರಿ ಡಾ. ರಮೇಶ ದಂಡಗಿ ಜಿಲ್ಲಾ ಪಂಚಾಯತಿಯ ಜಿಲ್ಲಾ ಐ.ಇ.ಸಿ ಸಂಯೋಜಕರು(ನರೇಗಾ) ಪ್ರಮೋದ ಗೋಡೆಕರ ಹಾಗೂ ಎಸ.ಬಿ.ಎಮ್ ಜಿಲ್ಲಾ ಸಮಾಲೋಚಕರಾದ ಬಾಹುಬಲಿ ಮೆಳವಂಕಿ ರವರು ಹಾಗೂ ಕಛೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.