Belagavi News In Kannada | News Belgaum

ಚನ್ನಮ್ಮ ಕಿತ್ತೂರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಪರಿಷ್ಕರಣೆ

ಬೆಳಗಾವಿ, ಮಾ.30: ಚನ್ನಮ್ಮನ ಕಿತ್ತೂರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸನ್ 2023, 24 ಸಾಲಿಗೆ ಆಸ್ತಿ ತೆರಿಗೆ ಮೇಲೆ ಆಸ್ತಿ ಮಾಲೀಕರಿಗೆ, ವಸತಿ ಮತ್ತು ವಾಸೇತರ ಕಟ್ಟಡಗಳಿಗೆ 3%, ವಾಣಿಜ್ಯ ಕಟ್ಟಡಗಳಿಗೆ 3% , ಖಾಲಿ ನಿವೇಶಗಳಿಗೆ 3% , ಕೈಗಾರಿಕೆಗಳಿಗೆ 3 % ರಷ್ಟು ದರ ಪರಿಷ್ಕರಣೆ ಮಾಡಲಾಗಿದೆ.
ಪರಿಷ್ಕರಣೆ ಮಾಡಿದ ತರದಲ್ಲಿ 2023-24ನೇ ಸಾಲಿನ ಆಸ್ತಿ ತೆರಿಗೆ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರು ಸಕಾಲದಲ್ಲಿ ಆಸ್ತಿ ತೆರಿಗೆ ನೀರಿನಕರ ಟೆಂಡರ್ ಲೈಸೆನ್ಸ್ ಭರಣ ಮಾಡಿ ಪಟ್ಟಣ ಪಂಚಾಯಿತಿಯೊಂದಿಗೆ ಸಹಕರಿಸಲು ಕೋರಲಾಗಿದೆ.
ಸೂಚನೆಗಳು:
ಏಪ್ರಿಲ್. 1, 2023 ರಿಂದ ಏಪ್ರಿಲ್. 30,2023 ರ ವರೆಗೆ 5% ರಿಯಾಯಿತಿ, ಮೇ.1, 2023 ರಿಂದ ಜೂನ್. 30,2023 ರವರಿಗೆ ದಂಡರಹಿತ ಪಾವತಿ, ಜುಲೈ. 1 ,2023 ರಿಂದ ಆಸ್ತಿ ತೆರಿಗೆ ಮೇಲೆ ಪ್ರತಿ ತಿಂಗಳು 2% ರಷ್ಟು ದಂಡ ವಿಧಿಸಲಾಗುವುದು ಎಂದು ಚ.ಕಿತ್ತೂರು ಪಟ್ಟಣ ಪಂಚಾಯತ್ ಆಡಳಿತ ಅಧಿಕಾರಿಗಳು ಹಾಗೂ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಮತದಾನ ಜಾಗೃತಿ: ಬೈಕ್ ಜಾಥಾ

ಬೆಳಗಾವಿ, ಮಾ.30: ತಾಲ್ಲೂಕಿನ ಹಿಂಡಲಗಾ ಗ್ರಾಮದ ಗಣೇಶ ದೇವಸ್ಥಾನದ ಹತ್ತಿರ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೂಯರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ತಾಲ್ಲೂಕ ಪಂಚಾಯತಿ ವತಿಯಿಂದ ಬುಧವಾರ ಮಾರ್ಚ್ 29 ರಂದು ಆಯೋಜಿಸಿದ್ದ ಮತ ಜಾಗೃತಿ ಬೈಕ್ ಜಾಥಾ ಹಿಂಡಲಗಾ, ಉಜಗಾಂವ ಮುಖಾಂತರ ಬೆಕ್ಕಿನಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ವಿವಿದ ಭೀದಿಗಳ ಬೈಕ್ ಮುಖಾಂತ ಸಂಚರಿಸಿ ಕಡಿಮೆ ಮತದಾನವಾಗಿರುವ ಗ್ರಾಮಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ, ಸಹಾಯಕ ನಿರ್ದೇಶಕರಾದ (ಉ.ಗ್ರಾ) ರಾಜೇಂದ್ರ ಮೊರಬದ, ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಗಣೇಶ ಕೆ.ಎಸ್., ಜಿಲ್ಲಾ ಐಇಸಿ ಸಂಯೋಜಕರಾದ ಪ್ರಮೋದ ಗೋಡೆಕರ್, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕರಾದ ಬಾಹುಬಲಿ ಮೆಳವಂಕಿ ತಾಲೂಕಾ ಐಇಸಿ ಸಂಯೋಜಕರಾದ ರಮೇಶ ಮಾದರ ಸೇರಿಂದತೆ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ವಿವಿಧ ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.////

ವಿಷೇಶ ಚೇತನರ ಮತ ಜಾಗೃತಿ: ಬೈಕ್ ಜಾಥಾ

ಬೆಳಗಾವಿ, ಮಾ.30: ತಾಲ್ಲೂಕಿನ ಕಂಗ್ರಾಳಿ.ಬಿ.ಕೆ ಗ್ರಾಮದ ಛತ್ರಪತಿ ಶಿವಾಜಿ ಮೈದಾನದಲ್ಲಿ ಮತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ತಾಲ್ಲೂಕ ಪಂಚಾಯತಿ ಹಾಗೂ ಕಂಗ್ರಾಳಿ ಬಿ.ಕೆ ಗ್ರಾಪಂ ವತಿಯಿಂದ ಗುರುವಾರ ಮಾರ್ಚ್ 30 ರಂದು ಆಯೋಜಿಸಿದ್ದ ವಿಷೇಶ ಚೇತನರ ಮತ ಜಾಗೃತಿ ಬೈಕ್ ಜಾಥಾ ಕಂಗ್ರಾಳಿ ಬಿ.ಕೆ ಹಾಗೂ ಕಂಗ್ರಾಳಿ ಕೆ.ಎಚ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ವಿವಿದ ಭೀದಿಗಳ ಬೈಕ್ ಮುಖಾಂತರ ಸಂಚರಿಸಿ ಕಡಿಮೆ ಮತದಾನವಾಗಿರುವ ಗ್ರಾಮಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಗಣೇಶ ಕೆ.ಎಸ್., ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜೆ.ಐ. ಬರಗಿ ತಾಲ್ಲೂಕು ಐಇಸಿ ಸಂಯೋಜಕರಾದ ರಮೇಶ ಮಾದರ ಸೇರಿಂದತೆ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.////