ಜನ್ಮಕಲ್ಯಾಣಕ ಮಹೋತ್ಸವ : ವಿವಿಧ ಕಾರ್ಯಕ್ರಮಗಳ ಆಯೋಜನೆ

ಬೆಳಗಾವಿ : ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆಳಗಾವಿಯ ಮಹಾವೀರ ಭವನದಲ್ಲಿ ಮಾ. 30 ರಂದು ಉತ್ಸಹ ಸಖಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಂಗೊಳ್ಳಿ ಚಿತ್ರ ಬಿಡಿಸುವ ಸ್ಫರ್ಧೆ, ತೋರಣ ತಯಾರಿಕಾ ಸ್ಪರ್ಧೆ , ಮಾವಿಣ ಹಣ್ಣಿನ ವಿವಿಧ ತಿನಿಸುಗಳ ತಯಾರಿಕಾ ಸ್ಪರ್ಧೆ, ಸಮೂಹ ನೃತ್ಯ, ಫ್ಯಾಷನ್ ಶೋ, ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿದವು.
ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ , ಮಾಜಿ ಶಾಸಕ ಸಂಜಯ ಪಾಟೀಲ, ಜಿತೋ ಚೇರಮನ್ ಮುಕೇಶ ಪೋರವಾಲ, ಡಾ. ಅಭಿನಂದನ ಹಂಜಿ , ಉದ್ಯಮಿ ತುಷಾರ ಬಾಳಾಸಾಹೇಬ ಪಾಟೀಲ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು. ಉತ್ಸಹ ಸಖಿ ಸಂಘಟನೆಯ ಮಾಧುರಿ ಲೆಂಗಡೆ , ತೃಪ್ತಿ ಮಾಂಗಲೆ, ಸುಪ್ರಿಯಾ ಸೂಜಿ ಸುಕನ್ಯಾ ಸೂಜಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು./////