Belagavi News In Kannada | News Belgaum

ಏ.2 ರಿಂದ ಕಲ್ಮೇಶ್ವರ ಜಾತ್ರಾ ಮಹೋತ್ಸವ

ಬೆಳಗಾವಿ : ತಾಲೂಕಿನ ಚಂದನಹೊಸೂರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವವು ರವಿವಾರ 02-04-2023 ರಿಂದ ಗುರುವಾರ ದಿ. 06-04-2023 ರವರೆಗೆ ಐದು ದಿನಗಳ ಕಾಲ ಸಂಭ್ರಮದಿಂದ ಜಾತ್ರಾ ಮಹೋತ್ಸವ ಜರುಗುವುದು.

ರವಿವಾರ ದಿ. 02 ರಂದು ಗ್ರಾಮಸ್ಥರಿಂದ ಅಂಬಲಿ ಬಂಡೆಯನ್ನು ಸಿದ್ದಪಡಿಸಿ ಕಿಚ್ಚದ ಕಟ್ಟಿಗೆಯನ್ನು ತಂದು ಪೂಜೆ ಸಲ್ಲಿಸುವರು. ಸೋಮವಾರ ದಿ. 03 ರಂದು ಬೆಳಿಗ್ಗೆ ಶ್ರೀ ಕಲ್ಮೇಶ್ವರ ದೇವರಿಗೆ ಮಹಾರುದ್ರಾಭೀಷೇಕ ನಂತರ ಸಾಯಂಕಾಲ 5 ಗಂಟೆಗೆ ಭಕ್ತಾದಿಗಳಿಂದ ಅಂಬಲಿ ಬಂಡೆಗಳು ಶ್ರೀ ಕಲ್ಮೇಶ್ವರ ಗುಡಿ ಪ್ರದಕ್ಷಣೆ ಹಾಕಿ ಭಕ್ತಾದಿಗಳಿಗೆ ಗುಗ್ಗರಿ ಹಾಗೂ ಅಂಬಲಿ ಮಹಾಪ್ರಸಾದ ಮಾಡಲಾಗುವುದು. ನಂತರ ರಾತ್ರಿ 10 ಗಂಟೆ ನಂತರ ಗೀಗಿ ಪದಗಳು(ಶಾವರಕಿ ಪದಗಳು) ನಡೆಯವುವು.

ಮಂಗಳವಾರ ದಿ. 04 ರಂದು ಗ್ರಾಮದ ಭಕ್ತಾಧಿಗಳು ಚಕ್ಕಡಿ, ಟ್ರಾಕ್ಟರ, ಟೆಂಪೂ ಹಾಗೂ ಇನ್ನೀತರ ವಾಹನಗಳಿಂದ ಕಿಚ್ಚದ ಕಟ್ಟಿಗಳನ್ನು ತಂದು ಕಿಚ್ಚವನ್ನು ತಯಾರಿಸಿ ಸಂಜೆ 6 ಗಂಟೆಗೆ ಕಿಚ್ಚ ಹಾಯುವುದು. ನಂತರ ರಾತ್ರಿ 10 ಗಂಟೆಗೆ ಶ್ರೀ ಕೃಷ್ಣ ಪಾರಿಜಾತ ನಡೆಯುವುದು.

ುಧವಾರ ದಿ. 05 ರಂದು ಹರಕೆ ಹೊತ್ತ ಭಕ್ತಾದಿಗಳು ದೇವರಿಗೆ ತೋಕಾನುತೂಕ ಕಾಯಿಗಳನ್ನು ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ. ನಂತರ ರಾತ್ರಿ 10 ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಗುರುವಾರ ದಿ. 06 ರಂದು ಕಲ್ಮೇಶ್ವರ ಪಾಲಕಿ ಸೇವೆಯೊಂದಿಗೆ ಜಾತ್ರೆಯು ಮುಕ್ತಾಯವಾಗುವುದು. ರಾತ್ರಿ 10 ಗಂಟೆಗೆ ಸಂಗ್ಯಾ ಬಾಳ್ಯಾ ನಾಟಕ ಜರುಗುವುದು ಎಂದು  ಜಾತ್ರಾ ಕಮೀಟಿಯ ಪಂಚರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊ. 7406821309////