ಕಾಗವಾಡ ತಾಲೂಕಿನಾದ್ಯಂತ ಮತದಾನ ಜಾಗೃತಿ ಅಭಿಯಾನ

ಬೆಳಗಾವಿ : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಯಲ್ಲಿ ಕಾಗವಾಡ ತಾಲೂಕಿನಾದ್ಯಂತ ಶನಿವಾರ ತಾಲೂಕು ಸ್ವೀಪ ಸಮೀತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕಾಗವಾಡ ತಾಲೂಕಿನ ಕುಸನಾಳ ಗ್ರಾಮದಲ್ಲಿ ಗ್ರಾಮಪಂಚಾಯತಿ ಸಿಬ್ಬಂದಿಗಳು ಮನೆಮನೆ ಭೇಟಿ ನೀಡಿ ಕರಪತ್ರಗಳ ಹಂಚಿಕೆ ಮಾಡುವುದರ ಜೊತೆಗೆ ಸ್ವಚ್ಚವಾಹಿನಿ ಜಿಂಗಲ್ಸ್ ಮೂಲಕ ಮತದಾನದ ಅರಿವು ಮೂಡಿಸಿದರು. ಕೃಷ್ಣಾ ಕಿತ್ತೂರು ಗ್ರಾಮದಲ್ಲಿ ಎನ್ ಆರ್ ಎಲ್ ಎಮ್ ಮಹಿಳಾ ಒಕ್ಕೂಟದ ವತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಗ್ರಾಮದ ಯುವಕ ಯುವತಿಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ನನ್ನ ಮತ ನನ್ನ ಹಕ್ಕು, ನನ್ನ ಮತ ಮಾರಾಟಕ್ಕಿಲ್ಲ, 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಿ, ಪ್ರತಿ ಮತವೂ ಅತ್ಯಮೂಲ್ಯ ತಪ್ಪದೇ ಮತದಾನ ಮಾಡಿ ಹೀಗೆ ಅನೇಕ ಘೋಷಣೆಗಳ ಜೊತೆಗೆ ಅಂದವಾಗ ರಂಗೋಲಿ ಬಿಡಿಸಿದ್ದರು. ಮಂಗಸೂಳಿ ಗ್ರಾಮದಲ್ಲಿ ಶಾಲಾ ಮಕ್ಕಳು ಜಾಗೃತಿ ಜಾಥಾ ನಡೆಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಿಗೆ ಅರಿವು ಮೂಡಿಸಿದರು.
ಗಾ.್ರಪಂ ಅಭಿವೃದ್ದಿ ಅಧಿಕಾರಿಗಳಾದ ಪ್ರಶಾಂತ ಇನಾಮದಾರ, ಸಂಜೀವಸೂರ್ಯವಂಶಿ, ಶ್ರೀದೇವಿವಾಲಿ, ಹಾಗೂ ಅಂಗನವಾಡಿ ಆಶಾಕಾರ್ಯಕರ್ತರು, ಗ್ರಾಮಸ್ಥರು ಮುಂತಾದವರು ಅಭಿಯಾನದಲ್ಲಿ ಭಾಗವಹಿಸಿದ್ದರು./////