Belagavi News In Kannada | News Belgaum

ಭಾಷಣದಿಂದ ಬೆಂಕಿ; ಕಾಜಲ್ ಹಿಂದುಸ್ಥಾನಿ ಮೇಲೆ ಪ್ರಕರಣ ದಾಖಲು

ಗಾಂಧಿನಗರ: ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತೆ ಕಾಜಲ್ ಶಿಂಗಾಲಾ @ ಕಾಜಲ್ ಹಿಂದೂಸ್ತಾನಿ ಅವರ ಮೇಲೆ ಪ್ರಚೋದನಕಾರಿ ಭಾಷಣಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ರಾಮನವಮಿಯಂದು ನಡೆದ ಕಾರ್ಯಕ್ರಮವೊಂದರಲ್ಲಿ ಕಾಜಲ್ ಅವರು ಭಾಷಣ ಮಾಡಿದ ನಂತರ ಸೋಮನಾಥ್ ನ ಉನಾದಲ್ಲಿ ಶನಿವಾರ ಎರಡು ಕೋಮುಗಳ ಮಧ್ಯೆ ಘರ್ಷಣೆ, ಪರಸ್ಪರ ಕಲ್ಲು ತೂರಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಉಭಯ ಕೋಮುಗಳ ಮುಖಂಡರನ್ನು ಒಳಗೊಂಡು ಪೊಲೀಸರು ಶಾಂತಿಸಭೆ ನಡೆಸಿದ್ದರು. ಆದರೆ ಸಭೆ ನಡೆದ ಕೇವಲ ೆರಡೇ ತಾಸುಗಳಲ್ಲಿ ಗಲಭೆ ನಡೆದಿತ್ತು.

ಕಾಜಲ್, ಬಲವಂತದ ಧಾರ್ಮಿಕ ಮತಾಂತರಗಳ ವಿರುದ್ಧ ಕೆಲಸ ಮಾಡುವುದಾಗಿ ಹೇಳಿಕೊಂಡಿರುವುದಲ್ಲದೆ, ಬಲಪಂಥೀಯ ಬೆಂಬಲಿಗರು ಪಾಕಿಸ್ತಾನಿ ಹಿಂದೂಗಳಿಗೆ ಗುಜರಾತ್‌ನಲ್ಲಿ ನೆಲೆಸಲು ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಇನ್ನೂ 50ಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.//////