Belagavi News In Kannada | News Belgaum

ಬೆಳಗಾವಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ 116 ನೇ ಜನ್ಮದಿನಾಚರಣೆ

ಬೆಳಗಾವ : ಡಾ. ಬಾಬು ಜಗಜೀವನ್ ರಾಮ್ ಅವರು ತಮ್ಮ ಬದುಕಿನುದ್ದಕ್ಕೂ ಹೋರಾಡಿದ ಮಹಾನ್ ವ್ಯಕ್ತಿ . ಈ ದೇಶದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ತಮ್ಮ ಬದುಕು ಮೀಸಲಿಟ್ಟ ಮಹಾನ್ ವ್ಯಕ್ತಿ ಎಂದು ಕೆ.ವಿ.ಜಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಬಸವರಾಜ ವಾಯ್.ಅರವಳ್ಳಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಸಂಗಮೇಶ್ವರ ನಗರದ ಡಾ. ಬಾಬು ಜಗಜೀವನ್ ರಾಮ್ ಉದ್ಯಾನವನದಲ್ಲಿ ಬುಧವಾರ (ಏ.5) ಏರ್ಪಡಿಸಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ 116 ನೇ ಜನ್ಮದಿನಾಚರಣೆಯ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

 

ಕೇಂದ್ರದ ಸಚಿವ ಸಂಪುಟದಲ್ಲಿ ಕಾರ್ಮಿಕ ಮಂತ್ರಿ ಯಾಗಿ

ಸಮಾಜದ ಸಮಸ್ಯೆ, ಕಾರ್ಮಿಕರ ಸಮಸ್ಯೆ ಹೀಗೇ ಹತ್ತು ಹಲವು ಸಮಸ್ಯೆಗಳನ್ನು ಹೋಗಲಾಡಿಸಿದರು.

ಸಚಿವರಾಗಿ,ಉಪ ಪ್ರಧಾನಿಗಳಾಗಿ, ಸಮಾಜದ ಸಮಗ್ರ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅವರು, ಸಮಾಜದಲ್ಲಿ ಜಾತಿ ಧರ್ಮ ಅಸಮಾನತೆಯನ್ನು ಹೋಗಲಾಡಿಸುವುದರ ಮೂಲಕ ಸಮಾಜದ ಸಮಾನತೆಗಾಗಿ ಶ್ರಮಿಸಿದವರು ಎಂದು ಹೇಳಿದರು.

 

ಸಾರಿಗೆ ಮಂತ್ರಿಯಾಗಿ ವಿಮಾನ ಯಾನವನ್ನು ಸಹ ಮೊದಲು ರಾಷ್ಟ್ರೀಕೃತ ಮಾಡಿದರು ಮತ್ತು ರೈಲ್ವೆ ಮಂತ್ರಿ ಯಾಗಿಯೂ ಸಹ ಸಮರ್ಪಕವಾದ ಆಡಳಿತ ನಡೆಸಿದರು. ಇದನ್ನು ಸಹಿಸದ ಜನರು ಅವರನ್ನು ತುಳಿಯುವ ತಂತ್ರಗಳನ್ನು ರೂಪಿಸಿ ಭಾರತದಲ್ಲಿ ಬರಗಾಲ ಬಂದ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಆಹಾರ ಖಾತೆ ಕೊಟ್ಟರು. ಆದರೆ ಅವರು ಅಧಿಕಾರ ಸ್ವೀಕರಿಸಿದ ದಿನವೇ ದೇಶಾದ್ಯಂತ ಮಳೆ ಆಯಿತು, ಇದರ ಅರ್ಥ ಅವರು ಒಬ್ಬ ಮಹಾನ್ ವ್ಯಕ್ತಿ. ಅವರ ಸಾಮಾಜಿಕ ಸೇವೆಗೆ ದೇವರು ಕೂಡ ಸಹಕರಿಸಿದ ಎಂದು ಬಸವರಾಜ ವಾಯ್.ಅರವಳ್ಳಿ ಹೇಳಿದರು.

 

ಕೃಷಿಯಲ್ಲಿ ಅನೇಕ ಸುಧಾರಣೆ ಮಾಡಿದ್ದಕ್ಕಾಗಿ ಅವರಿಗೆ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆದರು. ಹೀಗೆ ಕೇಂದ್ರದ ಎಲ್ಲ ಖಾತೆಗಳನ್ನು ಉತ್ತಮವಾಗಿ ಮಾಡಿ ಸೈ ಎನಿಸಿಕೊಂಡರು ಇದರಿಂದ ಬಾಬು ಜಗಜೀವನ್ ರಾಮ್ ಅವರು ಯಾವುದೇ ಖಾತೆ ಕೊಟ್ಟರು ಅದನ್ನು ನಿಭಾಯಿಸಬಲ್ಲರು ಎಂದು ತಿಳಿದುಕೊಂಡರು. ಹಾಗೇ ನಾವ ಎಲ್ಲರೂ ಅವರ ಜೀವನ ಶೈಲಿ ಹಾಗೂ ಅವರ ಜೀವನ ಚರಿತ್ರೆ ಮತ್ತು ಅವರ ವಿಚಾರ ಚಿಂತನೆಗಳನ್ನು ಅಳವಡಿಸಿಕೊಂಡರೆ ಮಾತ್ರ ಇಂತಹ ಹಲವಾರು ಬದಾವಣೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಕೆ.ವಿ.ಜಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಬಸವರಾಜ ವಾಯ್.ಅರವಳ್ಳಿ ಅವರು ಹೇಳಿದರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿ ಗಂಗಾಧರ ದಿವಟರ ಅವರು, ಬಾಬು ಜಗಜೀವನ್ ರಾಮ್ ಅವರ ಕಾಲದಲ್ಲಿ ಅಸ್ಪೃಶ್ಯತೆ ಅನ್ನೋವುದು ತಾಂಡವಾಡುತ್ತಿತ್ತು ಅಂತಹ ದಿನಗಳಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಸಮಾನತೆಗಾಗಿ, ಹೋರಾಡಿದವರು ಮತ್ತು ಇಂತಹ ಅನೇಕ ಮಹಾನ್ ವ್ಯಕ್ತಿಗಳ ಪರಿಶ್ರಮ ಹೋರಾಟದಿಂದ ಸಮಾಜದಲ್ಲಿ ಅವತ್ತಿನ ದಿನಗಳಿಗಿಂತ ಇವತ್ತಿನ ದಿನಗಳು ಬದಲಾವಣೆ ಆಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೆÇಲೀಸ್ ಆಯುಕ್ತರಾದ ಡಾ. ಎಂ ಬಿ. ಬೋರಲಿಂಗಯ್ಯ, ಅಪರ ಜಿಲ್ಲಾಧಿಕಾರಿಗಳಾದ ಕೆ.ಟಿ. ಶಾಂತಲಾ, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಬಿ. ಕಲ್ಲೇಶ್, ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಬಸವರಾಜ ಚನ್ನಯನವರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಕುರಿಹುಲಿ, ಬಸವರಾಜ ರಾಯವ್ವಗೊಳ, ಆನಂದ್ ಕುಮಾರ್ ಪಾಟೀಲ್ ಹಾಗೂ ಮತ್ತಿತರ ಗಣ್ಯರು, ಹಿರಿಯರು, ಮಹಿಳೆಯರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 

ಭಾವಚಿತ್ರದ ಭವ್ಯ ಮೆರವಣಿಗೆ:

ಇದಕ್ಕೂ ಮುನ್ನ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯ ನಿಮಿತ್ಯ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಜಿಲ್ಲಾಧಿಕಾರಿಗಳಾದ ನಿತೇಶ್ ಕೆ. ಪಾಟೀಲ್ ಅವರು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಚಾಲನೆ ನೀಡಿದರು.

ಪೆÇಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸಂಜೀವ್ ಪಾಟೀಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೋಯರ್ ಹಾಗೂ ಮತಿತ್ತರ ಗಣ್ಯರು ಉಪಸ್ಥಿತರಿದ್ದರು.

 

ಜಿಲ್ಲಾಧಿಕಾರಿಗಳ ಕಚೇರಿಯಿಂದ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಂಚರಿಸಿದ ಮೆರವಣಿಗೆಯು ಸಂಗಮೇಶ್ವರ ನಗರದ ಬಾಬು ಜಗಜೀವನ್ ರಾಮ್ ಉದ್ಯಾನವನ ತಲುಪಿತು.

ಭವ್ಯ ಮೆರವಣಿಗೆಯಲ್ಲಿ ಗಣ್ಯರು, ಮಹಿಳೆಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು./////