Belagavi News In Kannada | News Belgaum

ಕೈಲಾಸ ಕಲಾಧರ ಸಂಸ್ಥೆಯ ವತಿಯಿಂದ “ದಿವ್ಯಾಂಗ ಅಂತರ್ಶಕ್ತಿ” ಮತ್ತು “ನವರಸದುರ್ಗ” ನೃತ್ಯರೂಪಕ

 

ಬೆಂಗಳೂರು: ಕನ್ನಡ ನಾಡಿನ ಪ್ರಖ್ಯಾತ ಸಾಂಸ್ಕೃತಿಕ ಸಂಘಟನೆಯಾದ ಡಾ ಜಯಲಕ್ಷ್ಮಿ ಜಿತೇಂದ್ರ ಭಾಗವತ್ ರವರ ನೇತೃತ್ವದ ಕೈಲಾಸ ಕಲಾಧರ ಸಾಂಸ್ಕೃತಿಕ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ “ದಿವ್ಯಾಂಗ ಅಂತರ್ಶಕ್ತಿ” ಎಂಬ ರಂಗ ಪ್ರವೇಶ ಕಾರ್ಯಕ್ರಮವನ್ನು ಮತ್ತು “ನವರಸದುರ್ಗ” ಎಂಬ ನೃತ್ಯರೂಪಕ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿತ್ತು. ದಿವ್ಯಾಂಗ ಪ್ರತಿಭೆಗಳಾದ ಕುಮಾರಿ ಎಂ ಎನ್ ಕಾವ್ಯ ಮತ್ತು ಲಿಂಗರಾಜುರವರು ತಮ್ಮ ಅದ್ಭುತ ಭರತನಾಟ್ಯ ನೃತ್ಯದ ಮೂಲಕ ರಂಗ ಪ್ರವೇಶವನ್ನು ಮಾಡಿದರು.

ಸ್ಕ್ರಿಪ್ಟ್ ರೈಟರ್, ನಿರ್ದೇಶಕಿ, ನೃತ್ಯ ಸಂಸ್ಥಾಪಕಿ ಗುರು. ಶ್ರೀಮತಿ. ಡಾ.ಕೆ.ಜಯಲಕ್ಷ್ಮಿ ಜಿತೇಂದ್ರ ಭಾಗವತ್ ರವರ ಸಾರಥ್ಯದಲ್ಲಿ ಮೂಡಿ ಬಂದ “ನವರಸದುರ್ಗ” ನೃತ್ಯರೂಪಕವಂತೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಸುಮಾರು 40ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ದುರ್ಗೆಯಾಗಿ ಅಭಿನಯಿಸಿದ ಡಾ. ಕೆ ಜಯಲಕ್ಷ್ಮಿ ರವರ ಅಮೋಘ ನೃತ್ಯ ಮತ್ತು ಅಭಿನಯ ಪ್ರೇಕ್ಷಕರ ಮನದಲ್ಲಿ ಅವರ್ಣನೀಯ ಅನುಭವವನ್ನು ಉಂಟುಮಾಡಿತು. ಅವರ ವಿಶೇಷತೆ, ವಿಶಿಷ್ಟತೆ, ವಿಭಿನ್ನತೆ ನೃತ್ಯದುದ್ದಕ್ಕೂ ಗಮನಸೆಳೆಯಿತು. ಭಾಗವಹಿಸಿದ್ದ ಗಣ್ಯರು ಇದೊಂದು ಅಂತರಾಷ್ಟ್ರೀಯ ಮಟ್ಟದ ಅತ್ಯದ್ಭುತ ಕಾರ್ಯಕ್ರಮವೆಂದು ಗುಣಗಾನ ಮಾಡಿದರು. ಇಂತಹ ಅದ್ಭುತ ಕಾರ್ಯಕ್ರಮ ರೂಪಿಸಿದಕ್ಕೆ ಗುರು ಡಾ. ಜಯಲಕ್ಷ್ಮಿ ಜಿತೇಂದ್ರ ರವರನ್ನು ತುಂಬು ಹೃದಯದಿಂದ ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ಆರ್ ಗೋವಿಂದ್ ನಾಯ್ಡು- ಹಿಂದುಳಿದ ವರ್ಗಗಳ ಮೋರ್ಚಾ ಖಜಾಂಚಿ. ಮಾಜಿ ಬಿಬಿಎಂಪಿ ಸದಸ್ಯ; ಶ್ರೀ. ಬಿ ವಿ ನಾಗರಾಜು- ಹಿರಿಯ ಪತ್ರಕರ್ತ, ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು; ಗುರು. ಶ್ರೀ. ಎಂ ಸಿ ಸುಜೇಂದ್ರ ಬಾಬು- WDC ಸದಸ್ಯ ಮತ್ತು ಕಲ್ಪಶ್ರೀ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ; ಬಿ.ಎಸ್.ನೀಲಕಂಠಯ್ಯ-ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ, ಮಾಜಿ ಚಂದಾಪುರ ಪುರಸಭೆ ಸದಸ್ಯ; ಮಂಜುಳಾ ನೀಲಕಂಠಯ್ಯ- ಚಂದಾಪುರ ಟೌನ್ ಪುರಸಭೆ ಮಾಜಿ ಅಧ್ಯಕ್ಷೆ, ಮಹಿಳಾ ಮೋರ್ಚಾ ತಾ.ಅಧ್ಯಕ್ಷೆ; ಸುನಿಲ್ ಅಹುಜಾ- ಅಧ್ಯಕ್ಷರು, ಅಹುಜಾ ಗ್ರೂಪ್ ಆಫ್ ಕಂಪನಿಗಳು; ಸುಗಮ ಸಂಗೀತಗಾರ ಕಿಕ್ಕೇರಿ ಕೃಷ್ಣಮೂರ್ತಿ,ಲೇಖಕ ಮತ್ತು ಪತ್ರಕರ್ತರಾದ ಮಣ್ಣೆ ಮೋಹನ್; ತಾಯಿನಾಡು ರಾಘವೇಂದ್ರ- ಸಂಸ್ಥಾಪಕರು ಮತ್ತು ಅಧ್ಯಕ್ಷರು, ಕರವೇ ಗಜಸೇನೆ; ಶ್ರೀಮತಿ ರೇವತಿ ಕಾಮತ್-ವೀಣಾ ವಾದಕಿ, ಲ್ಯಾಂಡ್‌ಸ್ಕೇಪರ್, ಪರಿಸರವಾದಿ; ಭರತಕಲಾಮಣಿ ಗುರು. ಡಾ.ಶ್ರೀ. ಸಿ ರಾಧಾಕೃಷ್ಣನ್; ನೃತ್ಯ ನಿಪುಣೆ,ಗುರು. ಡಾ.ಮಾಲಾ ಶಶಿಕಾಂತ್ ಮುಂತಾದವರು ಭಾಗವಹಿಸಿದ್ದರು.