Belagavi News In Kannada | News Belgaum

ಎಟಿಎಂಗೆ ಹಣ ತುಂಬುವ ಮೂರು ವಾಹನ ಜಪ್ತಿ

ಬೆಂಗಳೂರು: ಎಟಿಎಂಗೆ ಹಣ ತುಂಬುವ 3 ವಾಹನಗಳನ್ನು ಹೆಬ್ಬಗೋಡಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಚುನಾವಣಾ‌ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳನ್ನು ಪರಿಶೀಲಿಸುತ್ತಿದ್ದು, ಹಣದ ಕುರಿತು ದಾಖಲೆ ಕೇಳಲಾಗಿತ್ತು.  ಮೂರು ವಾಹನದ ಪೈಕಿ ಒಂದು ವಾಹನದಲ್ಲಿ ಹೆಚ್ಚುವರಿ ಹಣ ಪತ್ತೆಯಾಗಿದೆ. ಸಿಬ್ಬಂದಿ ಹೇಳಿದ ಲೆಕ್ಕಕ್ಕೂ ವಾಹನದ ಒಳಗಡೆ ಇದ್ದ ಹಣಕ್ಕೂ ತಾಳೆಯಾಗುತ್ತಿರಲಿಲ್ಲ. 10‌ ಲಕ್ಷ ರೂ. ಹೆಚ್ಚುವರಿ ಹಣ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ರೈಟರ್ಸ್ ಕಂಪನಿಯ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////