ಮಹಿಳೆಯರು ಸಂಘಟತರಾಗಿ ಹೋರಾಡಿ: ಸುಧಾ ಕರೆ

ಬೆಳಗಾವಿ: ” ಮಹಿಳೆಯರು ಶಾಂತಿಯುತವಾಗಿ ಜೀವನ ಸಾಗಿಸಬೇಕಾದರೆ ಸಂಘಟತರಾಗಿ ಹೋರಾಡಬೇಕು” ಎಂದು ಡಿಡಿಎಸ್ ದಲಿತ ಸಂಘರ್ಷ ಸಮಿತಿ ಸಂಘಟನಾ ಬೆಳಗಾವಿ ಸಂಚಾಲಕಿ ಸುಧಾ ಎಸ್ . ಮುರಕುಂಬಿ ಹೇಳಿದರು.
ನರಸಿಂಗಪುರ ವಿಠ್ಠಲ ಮಂದಿರದಲ್ಲಿ ಡಿಡಿಎಸ್ ದಲಿತ ಸಂಘರ್ಷ ಸಮಿತಿ ಕರ್ನಾಟಕ ಅಣ್ಣಯ್ಯ (ಬಣ) ಬೆಂಗಳೂರು ವತಿಯಿಂದ ಆಯೋಜಿಸಿದ ದಲಿತ ಸಂಘರ್ಷ ಸಮಿತಿ ಮಹಿಳಾ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಶ್ರೇಯೋಭಿವೃದ್ಧಿಗೆ ಸಂವಿಧಾನದಲ್ಲಿ ಪ್ರಾಶಸ್ತ್ರ ನೀಡುವ ಮೂಲಕ ಮಹಿಳೆಯರ ಸ್ವಾವಲಂಬಿಗಳಾಗಿ ಬದುಕಲು ಡಾ. ಬಿ ಆರ್ ಅಂಬೇಡ್ಕರ್ ಅವರು ಅವಕಾಶ ಕಲ್ಪಿಸಿದ್ದಾರೆ.
ಮಹಿಳೆಯರಿಗೆ ಮೋಸ, ಲೈಂಗಿಕ ದೌರ್ಜನ್ಯ ಮೇಲಿಂದ ಮೇಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇವುಗಳನ್ನು ಹತ್ತಿಕ್ಕಲು ಮಹಿಳೆಯರು ಸಂಘಟತರಾಗಿ ಹೋರಾಡಬೇಕಿದೆ ಎಂದರು.
ಸುನೀತಾ ಕೊಣ್ಣೂರ, ಗೌರವ್ವಾ ಶಿರಗುಪ್ಪಿ , ಜ್ಯೋತಿ ನಾಯಕ, ಪ್ರಿಯಂಕಾ ನಾಯಕ, ಉದ್ದಪ್ಪಾ ಮಾಡಗೇರಿ, ಭೀರಪ್ಪಾ ಗೋಟಿ, ಹನಮಂತ ಮಕ್ಕಲಿಗೋಳ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಸಂಗೀತಾ ಕಾಂಬಳೆ, ಮುತ್ತವ್ವಾ ಗಾಧ್ಯಿಗೋಳ, ರೇಣುಕಾ ಕುರಿ ಹಾಗೂ ಭೀಮಸಿದ್ದ ಕಮತೆ, ಭೀಮಶಿ ಗಸ್ತಿ, ಸಿದ್ಧಲಿಂಗ ಬೆನಾಡಿ , ರಾಯಪ್ಪಾ ಪೂಜಾರಿ ಹಾಗೂ ಇತರರು ಇದ್ದರು.///////