ದುಬೈ: ‘P7’ ಫ್ಯಾನ್ಸಿ ನಂಬರ್ ಪ್ಲೇಟ್ 122 ಕೋಟಿ ರೂ. ಗೆ ಹರಾಜು, ಬೆಚ್ಚಿದ ಜನರು

ದುಬೈ : ಫ್ಯಾನ್ಸಿ ಕಾರ್ ನಂಬರೊಂದು ಹೆಚ್ಚೆಂದರೆ ಕೆಲ ಲಕ್ಷ ರೂಪಾಯಿಗೆ ಮಾರಾಟವಾಗಬಹುದು.
ಆದರೆ ದುಬೈನಲ್ಲಿ ಫ್ಯಾನ್ಸಿ ಕಾರ್ ನಂಬರ್ ಒಂದನ್ನು ಬರೋಬ್ಬರಿ 122 ಕೋಟಿ ರೂಪಾಯಿ ಕೊಟ್ಟು ಖರೀದಿಸಿರುವುದು ಅಚ್ಚರಿ ಮೂಡಿಸಿದೆ. ದುಬೈನಲ್ಲಿ ನಡೆದ ‘ಮೋಸ್ಟ್ ನೋಬಲ್ ನಂಬರ್ಸ್’ (ಶುಭ ಸಂಖ್ಯೆಗಳ ಹರಾಜು) ಹರಾಜಿನಲ್ಲಿ ವಾಹನದ ನಂಬರ್ ಪ್ಲೇಟ್ P7 ಅನ್ನು ದಾಖಲೆಯ 55 ಮಿಲಿಯನ್ ದಿರ್ಹಮ್ಗಳಿಗೆ ಗೆ ಮಾರಾಟ ಮಾಡಲಾಗಿದೆ.
ಶನಿವಾರ ರಾತ್ರಿ ನಡೆದ ಆಕ್ಷನ್‌ನಲ್ಲಿ 15 ಮಿಲಿಯನ್ ದಿರ್ಹಮ್ ಬಿಡ್‌ನಿಂದ ಪ್ರಾರಂಭವಾಗಿ, ಬಿಡ್‌ಗಳು ಸೆಕೆಂಡುಗಳಲ್ಲಿ 30 ಮಿಲಿಯನ್ ದಿರ್ಹಮ್‌ಗೆ ಏರಿತು. ಟೆಲಿಗ್ರಾಮ್ ಅಪ್ಲಿಕೇಶನ್‌ನ ಸಂಸ್ಥಾಪಕ ಮತ್ತು ಮಾಲೀಕ ಫ್ರೆಂಚ್ ಎಮಿರಾಟಿ ಉದ್ಯಮಿ ಪಾವೆಲ್ ವ್ಯಾಲೆರಿವಿಚ್ ಡುರೊವ್ ಈ ನಂಬರ್ ಅನ್ನು 35 ದಿರ್ಹಮ್ಗಳಿಗೆ ಬಿಡ್ ಮಾಡಿದ್ದರು. ಈ ಬಿಡ್ ನಂತರ ಹಲವಾರು ನಿಮಿಷಗಳ ಕಾಲ ಬಿಡ್ ಅಲ್ಲಿಯೇ ಸ್ಥಿರವಾಗಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ಬಿಡ್ ಏರಲಾರಂಭಿಸಿ 55 ಮಿಲಿಯನ್ ದಿರ್ಹಮ್ಗಳಿಗೆ (122 ಕೋಟಿ 61 ಲಕ್ಷ ಭಾರತೀಯ ರೂಪಾಯಿ) ತಲುಪಿತು. ಬಿಡ್ನಲ್ಲಿ ಭಾಗವಹಿಸಿದ್ದ 7ನೇ ಪ್ಯಾನೆಲ್ ಈ ಬಿಡ್ ಕೂಗಿತ್ತು. ಆದರೆ ಇಷ್ಟು ಮೊತ್ತ ನೀಡಿ ನಂಬರ್ 7 ಅನ್ನು ಖರೀದಿಸಿದ ವ್ಯಕ್ತಿಯು ತನ್ನ ಐಡೆಂಟಿಟಿಯನ್ನು ಬಹಿರಂಗಪಡಿಸಿಲ್ಲ.
ಇದೇ ಸಮಯದಲ್ಲಿ ಅನೇಕ ಇತರ ವಿಐಪಿ ನಂಬರ್ ಪ್ಲೇಟ್‌ಗಳು ಮತ್ತು ಫೋನ್ ಸಂಖ್ಯೆಗಳ ಹರಾಜುಗಳಿಂದ 100 ಮಿಲಿಯನ್ ದಿರ್ಹಮ್ ($27 ಮಿಲಿಯನ್) ಸಂಗ್ರಹಿಸಲಾಗಿದೆ. ಈ ಮೊತ್ತವನ್ನು ರಮ್ಜಾನ್ ಹಬ್ಬದ ಸಮಯದಲ್ಲಿ ಅಗತ್ಯವಿರುವವರಿಗೆ ಆಹಾರ ಹಂಚಲು ಬಳಸಲಾಗುವುದು. ಜುಮೇರಾದಲ್ಲಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಕಾರ್ ನಂಬರ್ ಪ್ಲೇಟ್‌ಗಳು ಮತ್ತು ವಿಶೇಷ ಮೊಬೈಲ್ ಫೋನ್ ಸಂಖ್ಯೆಗಳ ಮಾರಾಟದಿಂದ 97,920,000 ದಿರ್ಹಮ್ ($26662313) ಸಂಗ್ರಹಿಸಲಾಗಿದೆ. ಎಮಿರೇಟ್ಸ್ ಆಕ್ಷ//////