Belagavi News In Kannada | News Belgaum

80 ವರ್ಷ ಮೇಲ್ಪಟ್ಟ ಮತದಾನರಿಗೆ ಮನೆಯಲ್ಲಿ ಮತದಾನದ ವ್ಯವಸ್ತೆ : ಸಿಇಓ ಹರ್ಷಲ್ ಭೊಯರ್

ಬೆಳಗಾವಿ : ಜಿಲ್ಲಾ ಪಂಚಾಯತಿ ಹಾಗೂ ಬೆಳಗಾವಿ ವೈಧ್ಯಕೀಯ ವಿಜ್ಞಾನ ಸಂಸ್ಥೆ ವತಿಯಿಂದ ಸೋಮವಾರ ಏಪ್ರಿಲ್ 10 ರಂದು ಆಯೋಜಿಸಿದ್ದ ಮತ ಜಾಗೃತಿ ಕ್ಯಾಂಡಲ್ ಜಾಥಾ ಕಾರ್ಯಕ್ರಮವು ವೈಧ್ಯಕೀಯ ವಿಜ್ಞಾನ ಸಂಸ್ಥೆ ಆವಣದಿಂದ ರಾಣಿ ಚೆನ್ನಮ್ಮ ವೃತ್ತದ ವರೆಗೆ ಕ್ಯಾಂಡಲ್ ಹಿಡಿದು ಸಂಚರಿಸಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ನನ್ನ ಮತ ಮಾರಾಟಕಿಲ್ಲ, ಮತದಾನದಿಂದ ವಂಚಿತರಾಗಬೇಡಿ, ನಮ್ಮ ಮತ ನಮ್ಮ ಹಕ್ಕು, ಆಮಿಷಕ್ಕೆ ಮರುಳಾಗದಿರಿ ಯೋಚಿಸಿ ಮತ ಚಲಾಯಿಸಿ, ಆಮಿಷಗಳನ್ನು ನಿರಾಕರಿಸಿ ನಿಮ್ಮಷ್ಟದಂತೆ ಚಲಾಯಿಸಿ, ಪ್ರತಿ ಮತವು ಅಮೂಲ್ಯ ತಪ್ಪದೇ ಮತ ಚಲಾಯಿಸಿ ಎಂದು ವಿವಿಧ ಮತಜಾಗೃತಿ ಘೋಷಣೆಗಳನ್ನು ಕುಗುವುದರ ಮುಖಾಂತರ ಮತಜಾಗೃತಿ ಮೂಡಿಸಲಾಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ ಬಾರಿ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಚುನಾವಣೆಯ ಕುರಿತು ಚಿತ್ರಕಲಾ ಸ್ಪರ್ಧೆ ಪ್ರಬಂಧ ಸ್ಪರ್ಧೆ. ವಿವಿಧ ಸರ್ಕಾರಿ ಇಲಾಖೆಯ ಸಿಬ್ಬಂದಿಗಳಿಂದ ಬೈಕ್ ಜಾಥಾ, ಕ್ಯಾಂಡಲ್ ಜಾಥಾ, ಲಿಂಗತ್ವ ಅಲ್ಪ ಸಂಖ್ಯಾತರಿಗೆ ಹಾಗೂ ವಿಶೇಷ ಚೇತನರ ಬೈಕ್ ಜಾಥಾ ಮೂಲಕ ಮತಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೇ-10 ಮತದಾನ ದಿನದಂದು ವಿಶೇಷ ಚೇತನರು ಮತ್ತು ವಯಸ್ಕರ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ, ಶ್ಯಾಮಿಯಾನ ಮೂಲಕ ನೆರೆಳಿನ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ವಿಶೇಷ ಚೇತನರಿಗೆ ವ್ಹಿಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕೆಲವು ವಿಶೇಷ ಚೇತನರಿಗೆ ಮತ್ತು 80 ವರ್ಷ ಮೇಲ್ಪಟ್ಟ ಮತದಾನರಿಗೆ ಮನೆಯಲ್ಲಿ ಮತದಾನ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತಿದ್ದು. ಮತದಾನದ ದಿನದಂದು ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತದಾರರ ಮನೆಗಳಿಗೆ ತೆರೆಳಿ ಮತದಾನ ಮಾಡುವ ಸಮಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಮತದಾನ ಮಾಡಿಸುತ್ತಾರೆ. ಅಂದಾಜು 1 ಲಕ್ಷ ಜಿಲ್ಲೆಯಲ್ಲಿ 80 ವರ್ಷ ಮೆಲ್ಪಟ್ಟ ಮತದಾರು ಮತ್ತು 40 ಸಾವಿರ ವಿಶೇಷ ಚೇತನರು ಮತದಾರರು ಇರುವದರಿಂದ ಅಂತಹ ಮತದಾರಿಗೆ ಮತದಾನದ ಮಾಡಲಿಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುವ ಜೊತೆಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ, ರಾಜ್ಯೋತ್ಸವ ಏಕಲವ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಪ್ಯಾರಾ ಈಜುಗಾರ ಹಾಗೂ ಸ್ವೀಪ್ ಐಕಾನ್ ರಾಘವೇಂದ್ರ ಆರ್. ಅಣ್ವೇಕರ್, ಡಾ. ಅಶೋಕ ಶಟ್ಟಿ, ವ್ಯಧ್ಯಕೀಯ ವ್ಯವಸ್ಥಾಪಕ ಡಾ. ಎ.ಬಿ. ಪಾಟೀಲ್, ನರ್ಸಿಂಗ ಕಾಲೇಜಿನ ಪ್ರಾಂಶುಪಾಲ ನಾಮದೇವ ಮಾಳಗಿ, ಪ್ರಕಾಶ ಕಡೋಲಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜುಳಾ ಪಾಟೀಲ್, ರವಿ ಅಜೂರ್, ಜಿಲ್ಲಾ ಐಇಸಿ ಸಂಯೋಕರಾದ ಪ್ರಮೋದ ಗೋಡೆಕರ ಜಿಲ್ಲಾ ಎಸ್.ಬಿ.ಎಂ ಸಮಾಲೋಚಕರಾದ ಬಾಹುಬಲಿ ಮೆಳವಂಕಿ ತಾಲ್ಲೂಕು ಐಇಸಿ ಸಂಯೋಜಕರಾದ ರಮೇಶ ಮಾದರ ಸೇರಿಂದತೆ ಬೆಳಗಾವಿ ವೈಧ್ಯಕೀಯ ವಿಜ್ಞಾನ ಸಂಸ್ಥೆ ಸಿಬ್ಬಂದಿಗಳು ವೈಧ್ಯಕೀಯ ವಿಧ್ಯಾರ್ಥಿಗಳು ಇದ್ದರು./////