Belagavi News In Kannada | News Belgaum

ಕಾಲ್ನಡಿಗೆ ಜಾಥಾ ಯಶಸ್ವಿ

ಬೆಳಗಾವಿ : ತಾಲೂಕು ಆಡಳಿತ ಮತ್ತು ಸ್ವೀಪ್ ಸಮೀತಿ ಬೈಲಹೊಂಗಲ, ತಾಲೂಕು ಪಂಚಾಯತ ಬೈಲಹೊಂಗಲ ಮತ್ತು ಅನುಷ್ಠಾನ ಇಲಾಖೆಯ ಅಧಿಕಾರಿ ವರ್ಗದವರು ಮತ್ತು ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಬಿ.ಎಡ್ ಪ್ರಶಿಕ್ಷಣಾರ್ಥಿಗಳ ಸಹಯೋಗದೊಂದಿಗೆ ನಗರದ ಚನ್ನಮ್ಮ ವೃತ್ತ ದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಕಾಲು ನಡೆಗೆ ಜಾಥಾಕ್ಕೆ ಶ್ರೀಮತಿ, ಪ್ರಭಾವತಿ ಫಕ್ಕಿರಪೂರ ಉಪವಿಭಾಗಾಧಿಕಾರಿಗಳು ಬೈಲಹೊಂಗಲ ರವರಿಂದ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತದನಂತರ ವೃತ್ತದಲ್ಲಿ ಎಲ್ಲರೂ ಪ್ರತಿಜ್ಞಾ ವಿಧಿಯನ್ನು ಭೋದಿಸುವುದು ಹಾಗೂ ಮತದಾನ ಜಾಗೃತಿಯ ಕರಪತ್ರಗಳ ಹಂಚಿಕೆ ಇತರೆ ಅರಿವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಎಲ್ಲಾ ಅಧಿಕಾರಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಯಶಸ್ವಿಗೊಳಿಸಿದರು.
ಉಪಸ್ಥೀತಿ, ಚುನಾವಣಾ ಅಧಿಕಾರಿ ಸತೀಶ ಕುಮಾರ, ಸ್ವೀಪ್ ಅಧ್ಯಕ್ಷರು ಎಸ್ ಎಸ್ ಸಂಪಗಾಂವಿ, ತಹಶೀಲ್ದಾರರು ಸಂಗಮೇಶ ಮೇಳ್ಳಿಕೇರಿ, ಎ ಎನ್ ಪ್ಯಾಟೀ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಹಾಜರಿದ್ದರು ಸದರಿ ಕಾರ್ಯಕ್ರಮಕ್ಕೆ ವಿಶೇಷವಾಗಿ ಸ್ಕೌಟ್ಸ್ ಮತ್ತು ಗೈಡ್ ತರಭೇತುದಾರರು, ಕೆ ಆರ್ ಸಿ ಎಸ್ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹಾಗೂ ಪ್ರಾಚಾರ್ಯರು, ಶಿಕ್ಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲ್ನಡಿಗೆ ಜಾಥಾದಲ್ಲಿ ಚುನಾವಣೆಗೆ ಸಂಬಂಧಿಸಿದ ಘೋಷವಾಕ್ಯಗಳನ್ನು ಖುಗುತ್ತಾ ಸಾರ್ವಜನಿಕರಿಗೆ ತಿಳಿಯುವ ರೀತಿಯಲ್ಲಿ ಮನವರಿಕೆ ಮಾಡುವ ಮೂಲಕ ತಪ್ಪದ್ದೇ ಮತ್ತು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೆಪಣೆ ಮಾಡಲಾಯಿತು.//////