Belagavi News In Kannada | News Belgaum

ಮದ್ಯ ಮಾರಾಟ ನಿಷೆಧ

ಬೆಳಗಾವಿ : ಬೆಳಗಾವಿ ನಗರದಲ್ಲಿ ಏಪ್ರಿಲ್.14 2023 ರಂದು ಭಾರತ ರತ್ನ ಡಾ.ಬಿ. ಆರ್. ಅಂಬೇಡ್ಕರ ರವರ ಜಯಂತಿಯ ಆಚರಣೆ ಮತ್ತು ಸುಮಾರು 45-50 ರೂಪಕ ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಸದರಿ ಮೆರವಣಿಗೆಯಲ್ಲಿ ಸುಮಾರು 10 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇರುತ್ತದೆ. ಕಾರಣ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಏ.13 2023 ರಂದು ರಾತ್ರಿ 10 ಗಂಟೆಯಿಂದ ಏ.14 2023 ರಂದು ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟದ ಅಂಗಡಿಗಳು, ಬಾರ್/ರೆಸ್ಟೋರೆಂಟ್‍ಗಳು, ಕ್ಲಬ್‍ಗಳು ಹಾಗೂ ದಾಸ್ತಾನು ಡಿಪೋಗಳಿಂದ ಸರಬರಾಜನ್ನು ಬಂದ್ ಇಡುವಂತೆ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೋಲಿಸ್ ಆಯುಕ್ತರು ಆದೇಶಿಸಿದ್ದಾರೆ./////