Belagavi News In Kannada | News Belgaum

ನಟ ಸಲ್ಮಾನ್ ಖಾನ್‌ ಕೊಲ್ಲುವುದಾಗಿ ಹೇಳಿದ್ದ ವ್ಯಕ್ತಿ ಬಂಧನ

ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‌ಗೆ ಆಗಾಗ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಲೇ ಇರುತ್ತದೆ. ಇತ್ತೀಚಿಗೆ ಸಲ್ಲುಗೆ ಏ.30ರೊಳಗೆ ಕೊಲ್ಲುವುದಾಗಿ ಬೆದರಿಕೆ ಕರೆ ಬಂದಿತ್ತು. ರಾಕಿ ಭಾಯ್ ಹೆಸರಿನಲ್ಲಿ ಸಲ್ಮಾನ್ ಧಮ್ಕಿ ಹಾಕಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ಬೆದರಿಕೆ ಹಾಕಿದ್ದವನನ್ನು ಪೊಲೀಸರು ಅರೆಸ್ಟ್  ಮಾಡಿದ್ದಾರೆ.
ಏಪ್ರಿಲ್ 30ರೊಳಗೆ ಸಲ್ಮಾನ್ ಖಾನ್‌ರನ್ನು ಕೊಲ್ಲುತ್ತೇನೆ ಎಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ತನ್ನನ್ನು ತಾನು ರಾಕಿಭಾಯ್ ಎಂದು ಹೇಳಿಕೊಂಡಿದ್ದ ಈತ 16 ವರ್ಷದ ಹುಡುಗನಾಗಿದ್ದು, ಥಾಣೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರಾಜಸ್ಥಾನದ ಜೋಧಪುರದ ನಿವಾಸಿಯಾಗಿರುವ ಈತ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ. ಈತನ ನಂಬರ್ ಅನ್ನು ಟ್ರ್ಯಾಕ್ ಮಾಡಲಾಗಿತ್ತು ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ.
ಕರೆ ಮಾಡಿದವರು ಅಪ್ರಾಪ್ತ ವಯಸ್ಸಿನ ಬಾಲಕ. ಇದು ಗಂಭೀರವಾದ ಕರೆಯಾಗಿರಲಿಲ್ಲ. ಆತ ಯಾಕಾಗಿ ಕರೆ ಮಾಡಿದ್ದ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಮಾ.18ರಂದು ಸಲ್ಮಾನ್ ಜೀವಬೆದರಿಕೆ ಕರೆ ಬಂದಿತ್ತು. ಸಲ್ಲು ಆತ್ಮೀಯರೊಬ್ಬರಿಗೆ ಸಲ್ಮಾನ್ ಕೊಲೆ ಬೆದರಿಕೆ ವಿಷ್ಯವಾಗಿ ಇಮೇಲ್ ಸಂದೇಶ ಬಂದಿತ್ತು. ಸಲ್ಮಾನ್ ಈಗ ಬಿಗಿ ಭದ್ರತೆ ನೀಡಲಾಗಿದೆ.
ಸಲ್ಮಾನ್ ಬೆದರಿಕೆ ಕರೆ ಹೆಚ್ಚಾಗುತ್ತಿದ್ದಂತೆ, ಬಿಳಿ ಬುಲೆಟ್ ಪ್ರೂಫ್ ನಿಸ್ಸಾನ್ ಎಸ್‌ಯುವಿ ಕಾರ್ ಖರೀದಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿ, ಭದ್ರತೆ ಕೂಡ ಹೆಚ್ಚಾಗಿದೆ. ಸಲ್ಮಾನ್ ಖಾನ್ ಅವರು ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಏ.21ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮೊದಲ ಬಾರಿಗೆ ಪೂಜಾ ಹೆಗ್ಡೆ- ಸಲ್ಮಾನ್ ಖಾನ್ ಜೋಡಿಯಾಗಿ ನಟಿಸಿದ್ದಾರೆ.//////