ಬಾರ ರಜೆ ಹಿನ್ನಲೆ ಧೂಪದಾಳ ಡ್ಯಾಂ ಗೆ ಈಜಲೂ ಹೋಗಿದ್ದ ನಾಲ್ಕು ಜನ ಮೃತ ಒಬ್ಬ ಪಾರು ಒಬ್ಬನ ಸ್ಥಿತಿ ಗಂಭೀರ

ಘಟಪ್ರಭಾ: ಅಂಬೇಡ್ಕರ ಜಯಂತಿ ಬಾರ ರಜೆ ಹಿನ್ನಲೆ ಧೂಪದಾಳ ಡ್ಯಾಂ ಗೆ ಈಜಲೂ ಹೋಗಿದ್ದ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಘಟಪ್ರಭಾ ಪುರ ಸಭೆ ವ್ಯಾಪ್ತಿಯ ಮನಿಷ್ ಬಾರ್’ನ ಆರು ಜನ ಕೆಲಸದ ಹುಡುಗರು. ಜಯಶೀಲ್ ಶಟ್ಟಿ ಎಂಬುವವರಿಗೆ ಸೇರಿದ ಮನಿಷ್ ಬಾರ್, ಒರ್ವ ಪಾರು, ಒರ್ವನ ಸ್ಥಿತಿ ಚಿಂತಾಜನಕ, ಇತರ ನಾಲ್ವರ ಮೃತ್ಯು.
ಪ್ರಾಣಾಪಾಯದಿಂದ ಪಾರು.
1) ವಿಠಲ ಜಾನು ಕೋಕರೆ ವಯಾ 18
ಸಾವು ಬದುಕಿನ ನಡುವೆ ಹೋರಾಟ
2) ರಾಮಚಂದ್ರ ವಿಷ್ಣು ಕೋಕರೆ ವಯಾ 17
ಮೃತರು
3) ಸಂತೋಷ ಬಾಬು ಇಡಗೆ. ವಯಾ: 16
4) ಅಜಯ ಬಾಬು ಜೋರೆ. ವಯಾ: 17
5) ಕೃಷ್ಣ ಬಾಬು ಜೋರೆ, ವಯಾ 16
6) ಆನಂದ ವಿಷ್ಣು ಕೋಕರೆ, ವಯಾ: 16
ಎಲ್ಲ ಬಾಲಕರು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಶಿರಗಿರಿಯವರು.
ಘಟಪ್ರಭಾ ಕೆಎಚ್ಐ ಆಸ್ಪತ್ರೆಗೆ 2.30 ರ ಸುಮಾರಿಗೆ ತರಲಾಗಿದೆ.
ಪೋಲಿಸ್ ಅಧಿಕಾರಿಗಳಲ್ಲಿ ನನ್ನ ವಿನಂತಿ ದಯವಿಟ್ಟು ಯಾವುದೆ ಕಾರಣಕ್ಕೂ ಘಟಪ್ರಭಾದ ಯಾವ ಬಾರ್’ಗಳ ಸಿಸಿ ಟಿವಿ ಪುಟೆಜ್ ಅಳಿಸದಂತೆ ಹಾಗೂ ಹಾಳು ಮಾಡದಂತೆ ನೋಡಿಕೊಳ್ಳಿ. ಸದರಿ ಬಾಲಕಾರ್ಮಿಕರನ್ನು ರಜೆಯ ನಿಮಿತ್ತ ಪ್ರವಾಸಕ್ಕೆ ಬಂದವರೆಂದು ಪ್ರಕರಣ ಮುಚ್ಚಿ ಹಾಕಲು ಪ್ರಭಾವಿಗಳ ಮೂಲಕ ಪ್ರಯತ್ನಿಸಲಾಗುತ್ತಿದೆ. ಒಂದು ವೇಳಿ ಸಿಸಿ ಟಿವಿ ಪುಟೇಜ್ ಲಭ್ಯವಾಗದಿದ್ದ ಪಕ್ಷದಲ್ಲಿ ಅದರ ಹೊಣೆ ನೀವೆ ಹೊರಬೇಕಾಗುತ್ತದೆ. ಕೂಡಲೆ ಸಿಸಿ ಟಿವಿ ಡಾಟಾ ಸ್ಟೋರೇಜ್ ವಶಕ್ಕೆ ಪಡೆಯಲು ಮನವಿ. ನೊಂದ ಕುಟುಂಬಗಳಿಗೆ ದೇವರನ್ನ ಸಾಕ್ಷಿಯಾಗಿಟ್ಟುಕೊಂಡು ನ್ಯಾಯ ಒದಗಿಸೋಣ. ನಮಗೂ ನಿಮಗೂ ಚಿಕ್ಕ ಮಕ್ಕಳಿಗೆ ಒಂದು ಕ್ಷಣ ಕಣ್ಣು ಮುಚ್ಚಿ ಆ ಮಕ್ಕಳೆ ನಮ್ಮ ಮಕ್ಕಳೆಂದು ಕಲ್ಪನೆ ಮಾಡಿಕೊಂಡು ಮುಂದು ವರೆಯಿರಿ. ಇಲ್ಲದಿದ್ದರೆ ಕಣ್ಣಿರ ಶಾಪದಿಂದ ನಾವ್ಯಾರು ಬಚಾವಾಗಲೂ ಸಾಧ್ಯವಿಲ್ಲ.