Belagavi News In Kannada | News Belgaum

ನನಗೆ ಕ್ಷೇತ್ರ ಇಲ್ಲವೆಂದ ಈಶ್ವರಪ್ಪಗೆ ಟಿಕೆಟ್ ಸಿಗಲಿಲ್ಲ ಎಂದ ಸಿದ್ದರಾಮಯ್ಯ

ಕಾರವಾರ: ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ನನಗೆ ಕ್ಷೇತ್ರ ಸಿಗುವುದಿಲ್ಲ ಎಂದು ಟೀಕಿಸುತ್ತಿದ್ದ ಕೆ.ಎಸ್‌.ಈಶ್ವರಪ್ಪಗೆ ಬಿಜೆಪಿಯವರು ಟಿಕೆಟ್‌ ಅನ್ನೇ ಕೊಡಲಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

‘ಈಶ್ವರಪ್ಪ, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಸೇರಿ ಹಲವು ಹಿರಿಯ ನಾಯಕರನ್ನು ಬಿಜೆಪಿಯವರು ನಡೆಸಿಕೊಂಡ ರೀತಿ ಸರಿಯಾಗಿಲ್ಲ’ ಎಂದು ಹಳಿಯಾಳದಲ್ಲಿ ಮಾಧ್ಯಮದವರ ಜತೆ ಮಾತನಾಡುವ ವೇಳೆ ಹೇಳಿದರು. ‘ಪಕ್ಷ ಕಟ್ಟಿದ ನಾಯಕರನ್ನು ಅಗತ್ಯಕ್ಕೆ ತಕ್ಕಂತೆ ಬಳಿಸಿಕೊಂಡು ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ’ ಎಂದರು.

‘ಜಗದೀಶ ಶೆಟ್ಟರ್ ಒಳ್ಳೆಯ ನಾಯಕ. ಆದರೆ ಅವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯಾಗಿಲ್ಲ. ಹಾಗೊಂದು ವೇಳೆ ಸೇರುವುದಾದರೆ ಸ್ವಾಗತಿಸುತ್ತೇವೆ. ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ, ಶಾಸಕ ಆರ್.ವಿ.ದೇಶಪಾಂಡೆ ಇದ್ದರು./////