Belagavi News In Kannada | News Belgaum

ದುಬೈಯನಲ್ಲಿ ಅಗ್ನಿ ಅವಘಡ; ನಾಲ್ವರು ಭಾರತೀಯರು ಸಾವು

ದುಬೈ:  ವಸತಿ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಭಾರತೀಯರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಕಿ ಅವಘಡದಲ್ಲಿ ನಾಲ್ವರು ಭಾರತೀಯರು ಸೇರಿ ಒಟ್ಟು 16 ಮಂದಿ ಸಜೀವ ದಹನವಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ. ವಸತಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ದುಬೈ ಸಿವಿಲ್ ಡಿಫೆನ್ಸ್ ಆಪರೇಷನ್ ರೂಮ್‌ನಲ್ಲಿ ಮಧ್ಯಾಹ್ನ 12.35 ಕ್ಕೆ ಬೆಂಕಿ ಕಾಣಿಸಿಕೊಂಡಿತು.  ದುಬೈ ಪೊಲೀಸರು, ದುಬೈನಲ್ಲಿರುವ ಭಾರತೀಯ ದೂತಾವಾಸ, ಇತರ ರಾಜತಾಂತ್ರಿಕ ಮಿಷನ್‌ಗಳು ಮತ್ತು ಮೃತರ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಭಾರತೀಯ ಸಮಾಜ ಸೇವಕ ನಾಸೀರ್ ವತನಪಲ್ಲಿ ಹೇಳಿದ್ದಾರೆ. ಇನ್ನೂ ಬೆಂಕಿ ಅವಘಡದ ಕಾರಣಗಳ ಬಗ್ಗೆ ವಿವರವಾದ ವರದಿ ನೀಡಲು ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ.//////