ಪಕ್ಷದ ವರಿಷ್ಠರ, ಮುಖಂಡರ, ಜನತಾ ಜನಾರ್ಧನರ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಿರುವೆ…!!

ಬೆಳಗಾವಿ : ಸೋಮವಾರ ನಗರದ ಪಾಲಿಕೆಯ ಆವರಣದಲ್ಲಿ ಇರುವ ಚುನಾವಣಾ ಅಧಿಕಾರಿಯ
ಕಾರಿಯ ಕಚೇರಿಯಲ್ಲಿ ಅಧಿಕೃತವಾಗಿ ಬೆಳಗಾವಿಯ ಉತ್ತರ ಮತಕ್ಷೇತ್ರದ ಅಭ್ಯರ್ಥಿಯಾಗಿ ಡಾ ರವಿ ಪಾಟೀಲ್ ಅವರು
ತಮ್ಮ ನಾಮಪತ್ರ ಸಲ್ಲಿಸಿದರು..
ಮಾನ್ಯ ಪ್ರಧಾನಿಯವರು, ಪಕ್ಷದ ಹಿರಿಯ ವರಿಷ್ಠರು, ರಾಜ್ಯ ನಾಯಕರು, ಸ್ಥಳೀಯ ನಾಯಕರು, ಎಲ್ಲರೂ ಸೇರಿ ನನಗೆ ಈ ಅವಕಾಶ ಮಾಡಿ ಕೊಟ್ಟಿದ್ದಾರೆ, ಅವರೆಲ್ಲರಿಗೂ ನಾನು ಸದಾ ಚಿರಋಣಿ ಎಂದರು..
ಅದೇ ರೀತಿಯಲ್ಲಿ ಕ್ಷೇತ್ರದ ಜನತೆ ಕೂಡಾ ನನ್ನ ಮೇಲೆ ತುಂಬಾ ನಿರೀಕ್ಷೆ ಇಟ್ಟು ನನಗೆ ಸಹರಿಸುತ್ತ ಇದ್ದಾರೆ, ನಾನು ಇವತ್ತು ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಅವರ ಆಶೀರ್ವಾದವೂ ಒಂದು ಕಾರಣ ಎಂದರು..
ಬೇನಕೆ ಅವರು ನಮ್ಮ ಜೊತೆಯಲ್ಲೇ ಇರುತ್ತಾರೆ, ಪಕ್ಷದ ಪರವಾಗಿಯೇ ಕೆಲಸ ಮಾಡುತ್ತಾರೆ, ನಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ ಎಂದರು..
ನನಗೆ ಎಲ್ಲಾ ಭಾಷೆ, ಜಾತಿ, ಧರ್ಮ, ಸಂಸ್ಕೃತಿಯ ಜನರೂ ಬೇಕು, ಏಕೆಂದರೆ ನಾನು ಎಲ್ಲರೊಂದಿಗೂ ಕೂಡಿ ಬೇಳೆದವನು, ಬೆಳಗಾವಿಯಲ್ಲಿ ಎಲ್ಲರೂ ಕೂಡಿ ಇರುವ ಒಳ್ಳೆಯ ವಾತಾವರಣ ಇದ್ದು, ಎಲ್ಲರೂ ಒಂದಾಗಿ ಇದ್ದುಕೊಂಡೇ ಅಭಿವೃದ್ಧಿಯತ್ತ ಸಾಗೋಣ ಎಂದರು…
ಇನ್ನು ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಸ್ವಚ್ಛತೆ, ಹೀಗೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಬೇಕು ಎಂಬ ವಿಚಾರಗಳು ಇವೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು..
ಮುಂದಿನ ದಿನಗಳಲ್ಲಿ ಬೆಳಗಾವಿಯ ಜನರು, ಹೊಸ ಅಭಿವೃದ್ದಿಪರವಾದ ಬೆಳಗಾವಿಯನ್ನು ನೋಡುತ್ತಾರೆ, ಆ ರೀತಿಯ ಕೆಲಸ ಮಾಡಿ ತೋರಿಸುತ್ತೇನೆ ಎಂದು ವಿಶ್ವಾಸದಿಂದ ನುಡಿದರು.