ಉತ್ತರದ ಬಿಜೆಪಿ ವಲಯ ಒಕ್ಕಟ್ಟಾಗಿ ಚುನಾವಣೆಯಲ್ಲಿ ಹೋರಾಟ ಮಾಡಲಿದೆ.. : ಶಾಸಕ ಅನಿಲ್ ಬೇನಕೆ

ಬೆಳಗಾವಿ : ನಗರದ ಉತ್ತರ ವಿಭಾಗದ ಬಿಜೆಪಿ ಅಧ್ಟರ್ಥಿಯ ಟಿಕೆಟ್ ಘೋಷಣೆ ಆದಾಗಿನಿಂದ ಇಂದಿನವರೆಗೂ, ಕೆಲವರಲ್ಲಿ ಗೊಂದಲ, ಅನುಮಾನಗಳು ಇದ್ದವು, ಆದರೆ ಆ ಎಲ್ಲಾ ಗೊಂದಲ ಅನುಮಾನಗಳಿಗೆ ತೆರೆ ಬಿದ್ದಿದೆ ಎನ್ನಬಹುದು..
ಬಿಜೆಪಿ ವರಿಷ್ಠರು ಬೆಳಗಾವಿ ಉತ್ತರಕ್ಕೆ ಡಾ ರವಿ ಪಾಟೀಲ್ ಅವರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡಿದ ಮೇಲೆ, ಉಳಿದ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಅಸಮಾಧಾನಗೊಂಡು, ಪ್ರತಿಭಟನೆ ಮಾಡಿದ್ದರು
ಆ ಕೆಲ ದಿನಗಳ ಕಳೆದಂತೆ, ಈಗ ವರಿಷ್ಠರು ಹೇಳಿದ ಪ್ರಕಾರ, ಪಕ್ಷದ ತತ್ವ ಸಿದ್ಧಾಂತದ ಪ್ರಕಾರ, ಹಾಗೂ ಸ್ವತಃ ರವಿ ಪಾಟೀಲರೇ ಹೋಗಿ ಎಲ್ಲರ ಮನವಲಿಸಿದ ಪರಿಣಾಮವಾಗಿ ಇಂದು ಉತ್ತರದ ಬಿಜೆಪಿ ವಲಯ ಒಕ್ಕಟ್ಟಾಗಿ ಚುನಾವಣೆಯಲ್ಲಿ ಹೋರಾಟ ಮಾಡಲಿದೆ..
ನಿನ್ನೆ ಮಾಜಿ ಶಾಸಕ ಅನಿಲ್ ಬೇನಕೆ ಅವರನ್ನು ಬೇಟಿ ಆಗಿ,. ಇಂದು ಮುರುಘೇಂದ್ರಗೌಢ ಪಾಟೀಲ್ ಅವರನ್ನು ಬೇಟಿ ಆಗಿ, ಎಲ್ಲರ ಮನಸ್ಸನ್ನೂ ಆತ್ಮೀಯತೆಯಿಂದ ಸೆಳೆದು, ಎಲ್ಲಾ ಬಿಜೆಪಿ ನಾಯಕರು ಒಂದಾಗಿ ಕೆಲಸ ಮಾಡುವಂತೆ ಮಾಡಿದ್ದು ಡಾ ರವಿ ಪಾಟೀಲ್ ಅವರ ಆತ್ಮೀಯತೆಗೆ ಸಾಕ್ಷಿಯಾಗಿದೆ..
ಉತ್ತರದ ಬಿಜೆಪಿ ಮುಖಂಡರಾದ ಅನಿಲ್ ಬೇನಕೆ ಹಾಗೂ ಮುರುಘೇಂದ್ರ ಪಾಟೀಲ್ ಅವರು ನಾವೆಲ್ಲರೂ ಬೇಶರತ್ತ ಆಗಿ, ನಮ್ಮ ಬಿಜೆಪಿ ಅಭ್ಯರ್ಥಿ ರವಿ ಪಾಟೀಲ್ ಅವರಿಗೆ ಬೆಂಬಲ ನೀಡಿ ಗೆಲ್ಲಿಸುತ್ತೇವೇ ಎಂದರು..
ನಮಗೆ ಪಕ್ಷ ಮುಖ್ಯ, ಪಕ್ಷದ, ವರಿಷ್ಠರ ನಿರ್ಣಯದಂತೆ ನಾವು ಉತ್ತರದಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿಗಾಗಿ ಶ್ರಮ ಪಡುತ್ತೇವೆ ಎಂದರು.