Belagavi News In Kannada | News Belgaum

ಬಾಲಚಂದ್ರ ಜಾರಕಿಹೊಳಿ ಹಾಗೂ ಭೀಮಪ್ಪ ಗಡಾದ ಅವರು ತಮ್ಮ ರಾಜಕೀಯ ಮರೆತು ಪರಸ್ಪರ ಕೈ ಮುಗಿಯುವ ಮೂಲಕ ಕುಶಲೋಪಚಾರಿ ವಿಚಾರಿಸಿದರು.

ಮೂಡಲಗಿ: ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೊರಬರುತ್ತಿದ್ದಂತೆಯೇ ಮಾಹಿತಿ ಹಕ್ಕು ಕಾರ್ಯಕರ್ತ ಪಕ್ಷೇತರ ಅಭ್ಯರ್ಥಿ ಭೀಮಪ್ಪ ಗಡಾದ ಅವರು ಪರಸ್ಪರ ಕುಶಲೋಪಚಾರಿ ವಿಚಾರಿಸಿದರು.

ಪರಸ್ಪರ ಎದುರಾಳಿಗಳಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಭೀಮಪ್ಪ ಗಡಾದ ಅವರು ತಮ್ಮ ರಾಜಕೀಯ ಮರೆತು ಪರಸ್ಪರ ಕೈ ಮುಗಿಯುವ ಮೂಲಕ ಕುಶಲೋಪಚಾರಿ ವಿಚಾರಿಸಿದರು.

ನಗುಮುಖದಿಂದಲೇ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗಡಾದ ಎದುರಾದಾಗ ಆರಾಮರೀ. ನಾವು ಆರಾಮರೀ.  ನಮಗೂ ಒಳ್ಳೆಯದಾಗಲಿ. ನಿಮಗೂ ಒಳ್ಳೆಯದಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ  ಪಕ್ಷೇತರ ಅಭ್ಯರ್ಥಿ ಬಿಮಪ್ಪ ಗಡಾದ್ ರವರಿಗೆ ಶುಭ ಹಾರೈಸಿದರು. ಈ ಅಪರೂಪದ ಘಟನೆಗೆ ಶಾಸಕರ ಕಾರ್ಯಕರ್ತರು ಸಾಕ್ಷಿಯಾದರು.