ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ: ಲಕ್ಷ್ಮೀನಾರಾಯಣ ಪಿ.

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಬುಧವಾರ ಏಪ್ರೀಲ್ 19 ರಂದು ಹುಕ್ಕೇರಿಯಲ್ಲಿ ಕೂಲಿ ಕಾರ್ಮಿಕರಿಗೆ ಮತಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕರು (ಗ್ರಾ.ಉ) ಲಕ್ಷ್ಮೀನಾರಾಯಣ ಪಿ ಅವರು ಕಾರ್ಮಿಕರೊಂದಿಗೆ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಮತ ಚಲಾಯಿಸುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ. ನಿಮಗೆ ಬೇಕಾದ ನಾಯಕರನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಮೇ 10 ರಂದು ಎಲ್ಲರೂ ಮತ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಕರೆ ಕೊಟ್ಟರು.
ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನಿಮ್ಮ ಮತವನ್ನು ಚಲಾಯಿಸಬೇಕು. ಮತವನ್ನು ಮಾರಿಕೊಂಡರೆ ನಿಮ್ಮನ್ನು ನೀವು ಮಾರಿಕೊಂಡಂತೆ. ಮತದಾನದಿಂದ ಯಾರು ವಂಚಿತರಾಗದೆ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಕಾರ್ಮಿಕರಿಗೆ ತಾಲೂಕಾ ಯೋಜನಾಧಿಕಾರಿಗಳು ತಿಳಿಸಿದರು.
ಸಹಾಯಕ ನಿರ್ದೇಶಕರು (ಗ್ರಾ.ಉ) ಲಕ್ಷ್ಮೀನಾರಾಯಣ ಪಿ, ತಾಲೂಕಾ ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ತಾಲೂಕಾ ಐಇಸಿ ಸಂಯೋಜಕರಾದ ಮಹಾಂತೇಶ ಬಾದವನಮಠ, ಬಿ. ಎಫ್,ಟಿ, ಗಳಾದ ಸಂಜು ಕಾಡಗಿ, ಮಹಾನಿಂಗ ನೊಗಿನಿಹಾಳ, ಸಿದ್ದಪ್ಪ ಬೆಳ್ಳಂಬಿ, ರಾಜು ನೊಗಿನಿಹಾಳ, ಪರುಶರಾಮ ಮಗದುಮ್ಮ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.//////