“ಯುವ ಮತದಾರರು ಮತದಾನ ಜಾತ್ರೆಯಲ್ಲಿ ಪಾಲ್ಗೊಳ್ಳಿ” :ತಾಲೂಕಾ ಸ್ವೀಪ್ ಅಧ್ಯಕ್ಷ ಸುಭಾಷ್ ಸಂಪಗಾಂವಿ ಹೇಳಿಕೆ.

ಬೆಳಗಾವಿ: ತಾಲೂಕಾ ಸ್ವೀಪ್ ಸಮೀತಿ ಬೈಲಹೊಂಗಲ ವತಿಯಿಂದ ವಿಧಾನ ಸಭಾ ಚುನಾವಣೆ 2023 ರ ಪ್ರಯುಕ್ತವಾಗಿ 16-ಬೈಲಹೊಂಗಲ ವಿಧಾನ ಸಭಾ ಮತಕ್ಷೇತ್ರ ದಲ್ಲಿ ಯುವ ಮತದಾರರ ಮತಗಟ್ಟೆ 133 ವಕ್ಕುಂದ ಕ್ಕೆ ಸ್ವೀಪ್ ಸಮೀತಿ ಅಧ್ಯಕ್ಷರು ಎಸ್ ಎಸ್ ಸಂಪಗಾಂವಿ ಭೇಟಿ ನೀಡಿ ಸದರಿ ಮತಗಟ್ಟೆಯನ್ನು ವೀಕ್ಷಣೆ ಮಾಡಿದರು.
ಇಲ್ಲಿ ಒಟ್ಟು ಯುವ ಮತದಾರರು 525 ಅದರಲ್ಲಿ ಪುರುಷ ಮತದಾರರು 279 ಹಾಗೂ ಮಹಿಳೆಯರು 246 ಜನ ಇದ್ದಾರೆ. ಮತದಾನ ಜಾತ್ರೆಯಲ್ಲಿ ಎಲ್ಲಾ ಯುವಕರು ಪಾಲ್ಗೊಳ್ಳಿ ಸೇಲ್ಪಿ ಸ್ಟೀಕ್ ಗೆ ಮತದಾನ ಮಾಡಿರುವ ಕೈಯನ್ನು ತೋರಿಸುವ ಮೂಲಕ ಯುವಕರಿಗೆ ಕರೆ ನೀಡಿದರು.
ಗ್ರಾಪಂ ಸೇಕ್ಟರ್ ಆಪೀಸರ್ ವಿಶ್ವನಾಥ ಎಚ್, ಪಿಡಿಓ ವಿಜಯಲಕ್ಷ್ಮಿ ಅನಿಗೋಳ ತಾಪಂ ಐಇಸಿ ಸಂಯೋಜಕ ಎಸ್ ವ್ಹಿ ಹಿರೇಮಠ ಗ್ರಾಪಂ ಸಿಬ್ಬಂದಿಗಳು ಹಾಜರಿದ್ದರು./////