Belagavi News In Kannada | News Belgaum

ಮತದಾನದಿಂದ ಸಮಾಜದಲ್ಲಿ ಸಮಾನತೆ ಸಾಧ್ಯ : ಹೂಗಾರ

ಬೆಳಗಾವಿ : ಮತದಾನ ಮಾಡುವದರಿಂದ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ. ಆದ್ದರಿಂದ ಎಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿ.ಐ ಹೂಗಾರ ಅವರು ಹೇಳಿದರು.
ತಾಲ್ಲೂಕಿನ ಕಿಣಯೇ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ನಾವಗೇ ಗ್ರಾಮದಲ್ಲಿ ಜಿಲ್ಲಾ ಪಂಚಾಯತ, ಗ್ರಾಮ ಪಂಚಾಯತ ಹಾಗೂ ಕೆ.ಎಲ್.ಇ ವಿಶ್ವ ವಿಧ್ಯಾಲಯ ಇವರ ಸಂಯೋಗದಲ್ಲಿ ಗುರುವಾರ ಏಪ್ರಿಲ್ 20 ರಂದು ರಾಮಲಿಂಗ ಮಂದಿರದಲ್ಲಿ ಆಯೋಜಿಸಿದ್ದ ಮತಜಾಗೃತಿ ಕಾಲು ನಡಿಗೆ ಜಾಥಾ ಕಾರ್ಯಕ್ರಮದ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾನದ ವಿಷಯದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರಿಗೂ ಒಂದೇ ಮತ ಚಲಾಯಿಸುವ ಹಕ್ಕು ಇದೆ. ಹಾಗಾಗಿ ಮತದಾನ ಮಾಡುವುದರಿಂದ ಯಾರು ವಂಚಿತರಾಗಬಾರದು. ತಮ್ಮ ಮತ ಚಲಾಯಿಸಿ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕೆಂದು ಅವರು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ನಾಗರಾಜ ಪಾಟೀಲ್ ಅವರು ಮಾತನಾಡಿ, ಸಾರ್ವಜನಿಕರು ಮತದಾನ ವಿಷಯದಲ್ಲಿ ಹಿಂಜರಿಯದೇ ಮುಕ್ತವಾಗಿ ಮತದಾನ ಮಾಡಬೇಕು ಎಂದು ಹೇಳಿದರು. ನಾವಗೇ ಗ್ರಾಮ ವಿವಿಧ ಬೀದಿಗಳಲ್ಲಿ ಸಂಚರಿಸಿ ಮತಜಾಗೃತಿ ಮೂಡಿಸಲಾಯಿತು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಪ್ರಕಾಶ ಕುಡಚಿ, ಜಿಲ್ಲಾ ಐಇಸಿ ಸಂಯೋಜಕರಾದ ಪ್ರಮೋದ ಗೋಡೆಕರ, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕರಾದ ಬಾಹುಬಲಿ ಮೆಳವಂಕಿ, ತಾಐಇಸಿ ಸಂಯೋಜಕರಾದ ರಮೇಶ ಮಾದರ, ಜಿಲ್ಲಾ ಪಂಚಾಯತ ಡಿಇಓ ದತ್ತಾತ್ರೇಯ ಚವ್ಹಾಣ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು./////