Belagavi News In Kannada | News Belgaum

ಪಾಟೀಲರ ವಿಜೃಂಭಣೆಯ ನಾಮಪತ್ರ ಸಲ್ಲಿಕೆಯ ಮೆರವಣಿಗೆ…!!

ಬೆಳಗಾವಿ : ಗುರುವಾರ ದಿನಾಂಕ 20 ರಂದು ನಾಮಪತ್ರಿಕೆ ಸಲ್ಲಿಸುವ ಕೊನೆಯ ದಿನವಾಗಿದ್ದು, ಬೆಳಗಾವಿಯ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ರವಿ ಪಾಟೀಲ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಈಗ ತಮ್ಮ ಜನಬೆಂಬಲದಿಂದ ಭವ್ಯವಾದ ಮೆರವಣಿಗೆಯ ಜಾಥಾ ಹಮ್ಮಿಕೊಂಡಿದ್ದರು..

ಡಾ ರವಿ ಪಾಟೀಲರ ಸಾವಿರಾರು ಬೆಂಬಲಿಗರು, ಮಹಿಳಾ ಮತ್ತು ಪುರುಷ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು, ನಗರ ಸೇವಕರು ಭಾಗಿಯಾದ ಈ ಭವ್ಯ ಹಾಗೂ ಅರ್ಥಪೂರ್ಣ ಮೆರವಣಿಗೆಯಲ್ಲಿ ಮಾರ್ಗದುದ್ದಕ್ಕೂ ಬೆಂಬಲಿಗರು ಹಾಗೂ ಸಾರ್ವಜನಿಕರು, ಬಿಜೆಪಿಗೆ, ಮೋದಿಯವರಿಗೆ, ಡಾ ರವಿ ಪಾಟೀಲ್ ಅವರಿಗೆ ಜೈಕಾರದ ಘೋಷಣೆಗಳು ಕೂಗುತ್ತಿದ್ದರು..

ಎಲ್ಲಿ ನೋಡಿದರೂ ಅಲ್ಲಿ ಬಿಜೆಪಿ ಬಾವುಟ ಮತ್ತು ಕೇಸರಿ ಕಲರವ ತುಂಬಿಕೊಂಡಿತ್ತು, ಸೇರಿದ ಎಲ್ಲಾ ಜನರೂ ಮಾರ್ಗದುದ್ದಕ್ಕೂ ಹಾಡು, ಕುಣಿತದೊಂದಿಗೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಈ ಸಲದ ಚುನಾವಣೆಯಲ್ಲಿ ರವಿ ಪಾಟೀಲ ಅವರನ್ನು ಗೆದ್ದೇ ಗೆಲ್ಲಿಸುತ್ತೇವೆ ಎಂಬ ಮಾತನ್ನು ಹೇಳುತ್ತಿದ್ದರು..

ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಈ ಕಾರ್ಯಕ್ರಮ, ನಗರದ ಸಂಭಾಜಿ ಚೌಕದಿಂದ ಪ್ರಾರಂಭವಾಗಿ, ಕಾಲೇಜ್ ರಸ್ತೆಯ ಮೂಲಕ, ರಾಣಿ ಚನ್ನಮ್ಮ ವೃತ್ತದಿಂದ, ಆರ್ಟಿಓ ವೃತ್ತದ ಮಾರ್ಗವಾಗಿ ಸಾಗಿ, ಮಹಾನಗರ ಪಾಲಿಕೆ ತಲುಪಿತು..

ಈ ಭವ್ಯ ಮೆರವಣಿಗೆಯಲ್ಲಿ, ರಾಜ್ಯ ಬಿಜೆಪಿ ವಕ್ತಾರ ಎಂಬಿ ಜಿರಲೆ, ಮಾಜಿ ಶಾಸಕರಾದ ಅಭಯ ಪಾಟೀಲ್, ಅನಿಲ್ ಬೇನಕೆ, ಬಸವರಾಜ್ ರೊಟ್ಟಿ, ಪಕ್ಷದ ಎಲ್ಲಾ ಪದಾಧಿಕಾರಿಗಳು, ನಗರ ಸೇವಕರು, ಕಾರ್ಯಕರ್ತರು, ಸಾರ್ವಜನಿಕರು, ಬೆಂಬಲಿಗರು ಭಾಗಿಯಾಗಿದ್ದರು.