70.560 ಲೀಟರ್ ಗೋವಾ ಮದ್ಯ ಸಾಗಾಟ ಅಬಕಾರಿ ಅವರಿಂದ ವಶ

ಕನಾ೯ಟಕ ವಿಧಾನಸಭೆ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಮಾನ್ಯ ಶ್ರೀ ಟಿ ನಾಗರಾಜಪ್ಪ ಅಬಕಾರಿ ಜಂಟಿಆಯುಕ್ತರು ಮಂಗಳೂರು ವಿಭಾಗ ಮಂಗಳೂರು. ಹಾಗೂ ಮಾನ್ಯ ಶ್ರೀ ಜಗದೀಶ ಎನ್ ಕೆ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದ ಮೇರೆಗೆ ಹಾಗೂ ಶ್ರೀ ಶಂಕರಗೌಡ ಪಾಟೀಲ ಮಾನ್ಯ ಅಬಕಾರಿ ಉಪ ಅಧೀಕ್ಷಕರು ಯಲ್ಲಾಪುರ ಉಪವಿಭಾಗ ಯಲ್ಲಾಪುರ ರವರ ಮಾರ್ಗದರ್ಶನ ಮೇರೆಗೆ ಚುನಾವಣೆಯ ನಿಮಿತ್ತ ಅಬಕಾರಿ ತನಿಖಾಠಾಣೆಯಲ್ಲಿ ಕಾಯ೯ನಿವ೯ಹಿಸುತ್ತಿರುವ ಪೊಲೀಸ ಸಿಬ್ಬಂದಿ ಹಾಗೂ ಎಸ್. ಎಸ್. ಟಿ ತಂಡದವರೊಂದಿಗೆ ಜಂಟಿಯಾಗಿ
ದಿನಾಂಕ: 22/04/ 2023 ರಂದು ಬೆಳಿಗ್ಗೆ 11:30 ಗಂಟೆ ಸಮಯಕ್ಕೆ ಜೋಯಿಡಾ ತಾಲೂಕಿನ ಅನಮೋಡ ಗ್ರಾಮದ ಅಬಕಾರಿ ತನಿಖಾ ಠಾಣೆಯ ಮುಂಭಾಗದಲ್ಲಿ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಟಾಟಾ ಕಂಪನಿ ಲಾರಿ ವಾಹನ ನೋಂದಣಿ ಸಂಖ್ಯೆ
KA 22 B 0738 ದರಲ್ಲಿ 70.560 ಲೀಟರ್ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಸಂತೋಷ ರಾಯಪ್ಪ ಚೌಗಲೆ .ಸಾಕೀನ:ನಂದಿಹಳ್ಳಿ,
ತಾ/ಜಿ/ ಬೆಳಗಾವಿ.ಎಂಬುವವರನ್ನು ದಸ್ತಗಿರಿ ಮಾಡಲಾಗಿದ್ದು ವಾಹನ ಮಾಲೀಕನನ್ನು ಪತ್ತೆ ಹಚ್ಚಬೇಕಾಗಿದೆ. ಅಬಕಾರಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ರಾದ
ಶ್ರೀ ಶ್ರೀಕಾಂತ ಬಿ ಅಸೂದೆ
ಅಬಕಾರಿ ಪೇದೆಗಳಾದ
ಶ್ರೀ ಆರ್. ವಿ. ಭಟ್ಕಳ್
ಶ್ರೀ ಯು ಎನ್ ತುಳಜಿ. ಹಾಗೂ ಪೋಲಿಸ ಸಿಬ್ಬಂದಿಗಳಾದ ಶ್ರೀ ಬಿ.ಎಮ್.ದೊಡಮನಿ
ಅನುಪಮಾ ಘೂಗರೆ .ಮತ್ತು
ಎಸ್. ಎಸ್. ಟಿ ತಂಡದ ಶ್ರೀ ಪ್ರವೀಣ ಕುಲಕರ್ಣಿ, ವಿನೋದ ಗಾವಡೆ.
ಪಾಲ್ಗೊಂಡಿರುತ್ತಾರೆ. ಅಬಕಾರಿ ಸ್ವತ್ತು ಹಾಗೂ ವಾಹನದ ಅಂದಾಜು ಮೌಲ್ಯ 803536 /- ಆಗಿರುತ್ತದೆಎಂದು ಅಂದಾಜಿಸಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ.