ಬಸ್ ನಲ್ಲಿ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ಹಣ ವಶಕ್ಕೆ

ಬೆಳಗಾವಿ: ಯಾವದೇ ದಾಖಲೆ ಇಲ್ಲದೆ ಸಾರಿಗೆ ಸಂಸ್ಥೆಯ ಬಸನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಗೋಕಾಕ ಬಳಿಯ ಪಾರನಟ್ಟಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಗೋಕಾಕ ಬಳಿಯ ಪಾರನಟ್ಟಿ ಚೆಕ್‌ಪೋಸ್ಟ್ ಬಳಿ ಸಾರಿಗೆ ಬಸ್ ಪ್ರಯಾಣಿಕರೊಬ್ಬರಿಂದ 65 ಲಕ್ಷ ವಶಕ್ಕೆ ಪಡೆಯಲಾಗಿದೆ. ಇವರು ಈ ಹಣವನ್ನು ಸಾರಿಗೆ ಬಸನಲ್ಲಿ ಸಾಗಿಸುತ್ತಿದ್ದಾಗ ಗೋಕಾಕ ಎಸಿ ಅವರ ನೇತೃತ್ವದಲ್ಲಿ ಚುನಾವಣಾ ಅಧಿಕಾರಿಗಳು ಈ ಹಣವನ್ನು ವಶಪಡಿಸಿಕೊಂಡಿದ್ದಾರೆ./////