Belagavi News In Kannada | News Belgaum

ಪವರ ಪ್ಯಾರಾಗ್ಲೈಡಿಂಗ ಮೂಲಕ ಮತದಾನ ಜಾಗೃತಿ

ಬೆಳಗಾವಿ : ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕಾ ಸ್ವೀಪ ಸಮಿತಿ ವತಿಯಿಂದ ಮಂಗಳವಾರ ಏಪ್ರಿಲ್.25 ರಂದು ಸುವರ್ಣ ವಿಧಾನ ಸೌಧ ಆವರಣದಲಿ ್ಲನಿಮ್ಮ ಮತ ನಿಮ್ಮ ಹಕ್ಕು, ನೈತಿಕವಾಗಿ ಮತಚಲಾಯಿಸಿ ಎಂಬ ಘೋಷವಾಕ್ಯದೊಂದಿಗೆ ಪವರ ಪ್ಯಾರಾಗ್ಲೈಡಿಂಗ ಮೂಲಕ ಮತದಾನ ಜಾಗೃತಿ ಮಾಡಲಾಯಿತು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ ಭೋಯರ್, ಪೆÇೀಲಿಸ ವರಿಷ್ಠಾಧಿಕಾರಿಗಳಾದ ಸಂಜೀವ ಪಾಟೀಲ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ್, ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಜಿನೇಶ್ವರ ಪಡನಾಡ, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕ ಬಾಹುಬಲಿ ಮೆಳವಂಕಿ, ತಾಂತ್ರಿಕ ಸಂಯೋಜಕರಾದ ನಾಗರಾಜ ಯರಗುದ್ದಿ, ತಾಲ್ಲೂಕು ಐಇಸಿ ಸಂಯೋಜಕರಾದ ರಮೇಶ ಮಾದರ ಗ್ರಾಮ ಪಂಚಾಯತ ಸಿಬ್ಬಂದಿಗಳು, ವಿಶೇಷಚೇತನರು ಉಪಸ್ಥಿತರಿದ್ದರು./////