Belagavi News In Kannada | News Belgaum

ಅಕ್ರಮವಾಗಿ ಸಾಗಿಸುತ್ತಿರುವ ಮದ್ಯ ವಶ

ಬೆಳಗಾವಿ : ಬೆಳಗಾವಿ ತಾಲೂಕಿನ ಬಹದ್ದೂರವಾಡಿ ಕ್ರಾಸ್ ಹತ್ತಿರ ಇರುವ ಮರಾಠಾ ಮಂಡಳ ಶಾಲೆಯ ಮುಂಬಾಗದ ರಸ್ತೆಯಲ್ಲಿ ರಸ್ತೆಗಾವಲು ಮಾಡುತ್ತಿರುವಾಗ ಒಂದು ಬಿಳಿ ಬಣ್ಣದ ಮಹೇಂದ್ರಾ ವೇರಿಟೊ ನಾಲ್ಕು ಚಕ್ರ ವಾಹನ ಸಂಖ್ಯೆ ಕೆಎ-22 ಬಿ-8630 ನೇದ್ದರ ವಾಹನವನ್ನು ತಪಾಸಣೆ ಮಾಡಿದಾಗ ವಾಹನದಲ್ಲಿ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಅಂತಾ ನಮೂದಿರುವ ವಿವಿದ ನಮೂನೆಯ ಒಟ್ಟ್ಟು 105.750 ಲೀಟರ ಗೋವಾ ಮದ್ಯವನ್ನು ತಾಬಾ ಹೊಂದಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಏಪ್ರಿಲ್.25 2023 ರಂದು ಬೆಳಿಗ್ಗೆ 5.30 ಗಂಟೆಗೆ ಪತ್ತೆಯಾಗಿರುತ್ತದೆ.

ಎ1 ಆರೋಪಿತನು ಓಡಿ ಹೋಗಿ ಪರಾರಿಯಾಗಿದ್ದು, ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ಎ-2 ಒಂದು ಬಿಳಿ ಬಣ್ಣದ ಮಹೇಂದ್ರಾ ವೇರಿಟೊ ನಾಲ್ಕು ಚಕ್ರ ವಾಹನ ಸಂಖ್ಯೆ ಕೆಎ-22 ಬಿ-8630 ನೇದ್ದರ ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ಗುನ್ನೆಯ ಮುಂದಿನ ಕ್ರಮಕ್ಕಾಗಿ ವಾಹನ ಹಾಗೂ ಮುದ್ದೆಮಾಲನ್ನು ಪಂಚನಾಮೆ ಪ್ರಕಾರ ಜಪ್ತು ಮಾಡಿಕೊಂಡು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸದರಿ ದಾಳಿಯನ್ನು ಅಬಕಾರಿ ಅಪರ ಆಯುಕ್ತರಾದ ಮೋಹನಕುಮಾರ ಎಲ್.ಎನ್, ಅಬಕಾರಿ ಜಂಟಿ ಆಯುಕ್ತರಾದ ಫೀರೋಜಖಾನ ಕಿಲ್ಲೇದಾರ , ಅಬಕಾರಿ ಉಪ ಆಯುಕ್ತರು ಕುಮಾರಿ ವನಜಾಕ್ಷಿ.ಎಂ, ಹಾಗೂ ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ರವಿ ಎಂ ಮುರಗೋಡ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರು ಮಂಜುನಾಥ ಮೆಳ್ಳಿಗೇರಿ, ಬೆಳಗಾವಿ ವಲಯ ನಂ-2, ಇವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ಸದರಿ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಜ್ಯೋತಿ ಎಸ್.ಕೆ, , ಆನಂದ ಪಾಟೀಲ, ಅಬಕಾರಿ ಪೇದೆ ವಿನಾಯಕ ಬೋರನ್ನವರ, ಸಂತೋಷ ದೊಡಮನಿ, ದಾಳಿಯಲ್ಲಿ ಪಾಲ್ಗೊಂಡಿರುತ್ತಾರೆ. ಸದರ ಗುನ್ನೆಯಲ್ಲಿ ಜಪ್ತುಪಡಿಸಿದ ವಾಹನ ರೂ: 5,00,000/- ಹಾಗೂ ಮುದ್ದೇಮಾಲು 1,71,454/- ಹೀಗೆ ಒಟ್ಟು ಮೌಲ್ಯ ರೂ. 6,71,454/- ಆಗುತ್ತದೆ ಎಂದು ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////