ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಪ್ರಿಯಾಂಕಾ ಗಾಂಧಿ ಬೆಂಬಲ

ಬೆಂಗಳೂರು: ಲೈಂಗಿಕ ಕಿರುಕುಳ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೇಶದ ಪ್ರಮುಖ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಕುಸ್ತಿಪಟುಗಳ ಬೆಂಬಲಕ್ಕೆ ಪ್ರಿಯಾಂಕ ಗಾಂಧಿ ನಿಂತಿದ್ದು, ಬಿಜೆಪಿ ವಿರುದ್ಧ ಹರಿಹಾದಿದ್ದಾರೆ. ಕ್ರೀಡಾಪಟುಗಳು ನಮ್ಮ ದೇಶದ ಹೆಮ್ಮ, ನಮ್ಮ ಸಹೋದರಿಯರಿಗೆ ಬೆಂಬಲ ಸೂಚಿಸಲೇಬೇಕು.
ಕ್ರೀಡಾಪಟುಗಳನ್ನು ಯಾವಾಗಲೂ ನಮ್ಮ ಹೆಮ್ಮೆ ಎಂದು ಹೇಳೋದು ಯಾಕೆ ಹೇಳಿ? ಅವರು ತಮ್ಮ ಕಷ್ಟ ಏನೇ ಇದ್ದರೂ ದೇಶಕ್ಕಾಗಿ ಗೆಲ್ಲುತ್ತಾರೆ, ಗೆಲುವು ನಮ್ಮದೇ ಎನ್ನುವಂಥೆ ನಾವೆಲ್ಲರೂ ಖುಷಿಪಟ್ಟಿಲ್ಲವಾ? ಮಹಿಳಾ ಕ್ರೀಡಾಪುಟಗಳಿಗೆ ಗೆಚ್ಚು ಮಹತ್ವ ನೀಡಬೇಕಿದೆ.
ಪ್ರಕರಣದ ವಿಚಾರಣೆಯ ನಡೆಯಬೇಕು, ಸರ್ಕಾರ ಕೊಟ್ಟ ಸುಳ್ಳು ಭರವಸೆಯನ್ನು ನಂಬಿ ಕೂರುವಂತಿಲ್ಲ, ಏಕೆಂದರೆ ಎಲ್ಲವೂ ಹುಸಿಯಾಗಿದೆ ಎಂದಿದ್ದಾರೆ.//////