Belagavi News In Kannada | News Belgaum

ಸರಕಾರಿ ಕಾರ ವೈಯಕ್ತಿಕ ಕೆಲಸಕ್ಕೆ ಬಳಿಸಿದ ನಟಿ ತಾರಾ ವಿರುದ್ಧ FIR ದಾಖಲು

ಬೆಂಗಳೂರು: ನಟಿ ತಾರಾಅನುರಾಧ ಮೇಲೆ ಎಫ್​ಐಆರ್ ದಾಖಲಾಗಿದೆ. ಸರಕಾರಿ ಕಾರನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಂಡ ಆರೋಪದಲ್ಲಿ ನಟಿಯ ವಿರುದ್ಧ ಕೇಸ್ ದಾಖಲಾಗಿದೆ.

ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ನಟಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವಿಡಿಯೋ ಆಧರಿಸಿ ಫ್ಲೈಯಿಂಗ್ ಸ್ವ್ಕಾಡ್ ದೂರು ದಾಖಲಿಸಿದೆ.

ದೂರು ದಾಖಲಾದ ಬಳಿಕ ತಾರಾ ಅವರ ಮನೆ ಬಳಿ ಪರಿಶೀಲನೆಯನ್ನೂ ನಡೆಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಕಾರು ಮನೆ ಬಳಿ ಇರಲಿಲ್ಲ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಟಿ ತಾರಾ ವಿರುದ್ಧ ಪ್ರಕರಣ ದಾಖಲಾಗಿದೆ./////