ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಳಗಾವಿ : ಬೆಳಗಾವಿ ರೇಲ್ವೆ ಸ್ಟೇಷನ್ ನಿಲ್ದಾಣದಲ್ಲಿ ಸುಮಾರು 15 ದಿನಗಳಿಂದ ಎಲ್ಲಂದಲೋ ಬಂದು ಭಿಕ್ಷೆ ಬೇಡಿ ಇಲ್ಲಿಯೇ ಹೊಟೇಲಲ್ಲಿ ತಿಂದು ಮಲಗುತ್ತಿದ್ದ ವ್ಯಕ್ತಿ ಏಪ್ರಿಲ್.24 2023 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯ ನಡುವಿನ ವೇಳೆಯಲ್ಲಿ ಮೃತಪಟ್ಟಿರುತ್ತಾನೆ.
ಸದರಿ ಮೃತನ ವಾರಸುದಾರರು ಪತ್ತೆ ಆಗಿರುದಿಲ್ಲ. ಸದರಿ ಮೃತನ ಪಿ.ಎಮ್. ಪರೀಕ್ಷೆ ಮಾಡಿಸಿ ಮುಂದಿನ ಕಾನೂನಿನ ಕ್ರಮ ತೆಗೆದುಕೊಂಡು ಸದರಿ ಮೃತನ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರ ತಪಾಸಣೆ ಸಲುವಾಗಿ ಇಡಲಾಗಿದೆ.
ಮೃತ ವ್ಯಕ್ತಿಯ ವಿವರ: ವಯಸ್ಸು ಸುಮಾರು 65-70 ವರ್ಷ, ಎತ್ತರ: 5 ಮಾಟ 5 ಇಂಚು, ಉದ್ದು ಮುಖ, ಗೋಧಿಗೆಂಪು ಮೈಬಣ್ಣ, ಕಪ್ಪು ಕೂದಲು ಮತ್ತು ದಾಡಿ ಇರುತ್ತವೆ ಹಾಗೂ ಮೈಮೇಲೆ ಬಟ್ಟೆ ಇರುವುದಿಲ್ಲ. ನಡದಲ್ಲಿ ಕೇಸರಿ ಬಣ್ಣದ ಉಡದಾರ ಇರುತ್ತದೆ.
ಈ ರೀತಿ ಚಹರೆಯುಳ್ಳ ವ್ಯಕ್ತಿಯ ಮಾಹಿತಿ ಸಿಕ್ಕಲ್ಲಿ ಪೊಲೀಸ ಇನ್ಸಪೆಕ್ಟರ ಕ್ಯಾಂಪ ಪೊಲೀಸ ಠಾಣೆ ಬೆಳಗಾವಿ ಅಥವಾ ಪೊಲೀಸ ಕಂಟ್ರೋಲ್ ರೂಂ ಬೆಳಗಾವಿ ದೂರವಾಣಿ ಸಂಖ್ಯೆ 0831-2405234, 0831-2405255 ಗೆ ಸಂಪರ್ಕಿಸಬಹುದು ಎಂದು ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸ್ ಸಬ್-ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////