Belagavi News In Kannada | News Belgaum

ಮಾನಸಿಕ ಸ್ಥಿಮಿತ ಕಳೆದುಕೊಂಡ ಅಮಿತ್ ಶಾ: ಸುಧಾಮದಾಸ್ ಟೀಕೆ

ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎ. 25 ರಂದು ವಿಜಯಪುರಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುಗಲಭೆಯಾಗುತ್ತದೆ ಎಂದು ಹೇಳಿಕೆ ನೀಡಿ ರಾಜ್ಯದ ಜನತೆ ಕುರಿತು ದ್ವೇಷ ಭಾವನೆ ಹುಟ್ಟಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಸುಧಾಮದಾಸ್ ಟೀಕಿಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ರಾಜ ಧರ್ಮ ಪ್ರತಿಪಾಧಿಸುತ್ತಿದ್ದ ಅಟಲ್ ಬಿಹಾರಿ ವಾಜಪೇಯಿಂತವರು ಕಾಲದಲ್ಲಿ ಇದ್ದ ಬಿಜೆಪಿ ಈಗಿಲ್ಲ, ಆಡಳಿತದ ಎಲ್ಲಾ ಹಂತದಲ್ಲೂ ದ್ವೇಷ  ಭಾವನೆ ಬಿತ್ತುವ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸೋಲನ್ನು ಗ್ರಹಿಸಿರುವ ಅಮಿತ್‌ ಶಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆಯಲ್ಲಿ ನಾಲ್ಕು ಜನ ಅಭ್ಯರ್ಥಿಗಳನ್ನು ಸೇರಿಸಿಕೊಂಡು, ಕರ್ನಾಟಕವನ್ನು ಮೋದಿಯವರಿಗೆ ಒಪ್ಪಿಸಲು ಮತ ನೀಡಿ ಅಂತ ಹೇಳುತ್ತಿದ್ದಾರೆ, ಪ್ರಚಾರ ಸಮಯದಲ್ಲಿ ಶಿಷ್ಠಾಚಾರ ಗಾಳಿಗೆ ತೂರಲಾಗುತ್ತಿದೆ. ಬೇಜವಾಬ್ದಾರಿ ಹೇಳಿಕೆಗಳು ಮಿತಿ ಮೀರಿವೆ ಎಂದ ಅವರು, ಜಗದೀಶ ಶೆಟ್ಟರ್ ಅವರು ಕೇವಲ ಆತ್ಮಗೌರವದ ವಿಷಯ ಮುಂದಿಟ್ಟುಕೊಂಡು ಬಿಜೆಪಿ ದಿಕ್ಕರಿಸಿ ಕಾಂಗ್ರೆಸ್‌ ಸೇರಿದ್ದಾರೆ, ಅವರಿಗೆ ತಮ್ಮ ರಾಜಕೀಯ ಜೀವನ ನಿಷ್ಕಳಂಕ ಎನ್ನುವುದನ್ನು ಸಾಬೀತು ಮಾಡಬೇಕಿದೆ ಎಂದರು.

ಯಾರಾದರೂ ಬಿಜೆಪಿಯವರ ಆದೇಶ ಮೀರಿದರೆ ಸಿಬಿಐ, ಐಟಿಯನ್ನು ಬಳಸಿಕೊಳ್ಳಲಾಗುತ್ತಿದೆ, ಅಕ್ಟೋಬರ್ 6 ರಂದು ಯಡಿಯೂರಪ್ಪಗೆ ಸಂಬಂಧಿಸಿದವರ 30 ಕಡೆ ದಾಳಿ ನಡೆಸಿದ್ದಾರೆ, ಆ ಮೂಲಕ ಯಡಿಯೂರಪ್ಪ ಹಾಗೂ ಅವರ ಮಗನನ್ನು ಹಿಡಿದಿಟ್ಟುಕೊಂಡಿದ್ದಾರೆ, ಆದಾಯ ತೆರಿಗೆ ಇಲಾಖೆಯಲ್ಲಿ ಯಡಿಯೂರಪ್ಪನವರ ಸಮಸ್ತ ದೌರ್ಬಲ್ಯ ಇದೆ, ಅಮಿತ್‌ ಶಾ ಒತ್ತಡಕ್ಕೆ ಒಳಗಾಗಿ ಯಡಿಯೂರಪ್ಪ ಶೆಟ್ಟರ್ ವಿರುದ್ಧ ಮಾತಾಡ್ತಿದ್ದಾರೆ ಎಂದು ಹೇಳಿದರು.

2022-23 ರಲ್ಲಿ ಕರ್ನಾಟಕದಿಂದ ಜಿಎಸ್‌ಟಿ ಪಾವತಿ ಆಗಿದ್ದು 3 ಲಕ್ಷ 72 ಕೋಟಿ ರೂಪಾಯಿ, ಗುಜರಾತದಿಂದ 1 ಲಕ್ಷ 93 ಸಾವಿರ ಕೋಟಿ, ಉತ್ತರ ಪ್ರದೇಶದಿಂದ 1 ಲಕ್ಷ 33 ಸಾವಿರ ಕೋಟಿ ರೂಪಾಯಿ, 3 ಲಕ್ಷ 72 ಸಾವಿರ ಕೋಟಿ ಪಾವತಿ ಮಾಡಿದ ಕರ್ಣಾಟಕಕ್ಕೆ 50 ಸಾವಿರ ಕೋಟಿ ರೂಪಾಯಿ, ಉತ್ತರ ಪ್ರದೇಶದಲ್ಲಿ ಪಾವತಿ ಕಮ್ಕಿಯಾಗಿದ್ದರು ಯೋಜನೆಗಳ ಮೂಲಕ 2 ಲಕ್ಷ 90 ಸಾವಿರ ಕೋಟಿ ನೀಡಲಾಗಿದೆ, ಕರ್ನಾಟಕಕ್ಕೆ ಈ ಡಬಲ್‌ ಇಂಜಿನ್ ಸರ್ಕಾರ ಮೋಸ ಮಾಡ್ತಿದೆ, ಗೃಹ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಸಡಕ್ ಯೋಜನೆಯಲ್ಲಿ 3 ಲಕ್ಷ 700 ಮನೆಗಳು, ಸಹಾಯ ಧನ ಸಿಕ್ಕಿದ್ದು 1 ಲಕ್ಷ ಮನೆಗೆ, ಗುಜರಾತ್ ನಲ್ಲಿ 4 ಲಕ್ಷ ಮನೆಗೆ 3 ಲಕ್ಷ 99 ಸಾವಿರ ಮನೆಗಳಿಗೆ ಸಹಾಯ ಧನ ಸಿಕ್ಕಿದೆ, ಎರಡು ಲಕ್ಷ ಕೋಟಿ ನಮಗೆ ಅನುದಾನ ನೀಡಬೇಕುತ್ತು, ಆದರೆ ಕೇವಲ 37 ಸಾವಿರ ಕೋಟಿ ಮಾತ್ರ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ, ಕೇಂದ್ರ ಸರ್ಕಾರಗಳು ಸುಳ್ಳಿನ ಆಧಾರದ ಮೇಲೆ ಅಧಿಕಾರ ನಡೆಸುತ್ತಿವೆ, ಒಳ ಮೀಸಲಾತಿ ಆದೇಶ ಆಗಿದಿದ್ದರೂ ಸಹ ಶಿಪಾರಸ್ಸು ಮಾಡಿರುವ ಬಗ್ಗೆ ಘೋಷಣೆ ಮಾಡಿದ್ದಾರೆ, ಅದು ಜಾರಿ ಆಗಿದೆ ಎನ್ನುವ ರೀತಿಯಲ್ಲಿ ಬಿಂಬನೆ ಮಾಡಲಾಗ್ತಿದೆ, ದೀನ ದಯಾಳ್ ಉಪಾದ್ಯೆಯರ ಹೆಸರನ್ನ ಒಳಮೀಸಲಾತಿಗೆ ಇಡಲಾಗಿದೆ, ಸದಾಶಿವ ಆಯೋಗದ ವರದಿ ಜಾರಿ ಆಗಿಲ್ಲ. ಆಗೋದು ಇಲ್ಲ, 9 ಶೆಡ್ಯೂಲ್ಗೆ ಸೇರದ ಹೊರತು ಇದನ್ನ ‌ಜಾರಿಗೊಳಿಸಲು ಅವಕಾಶ ಇರುವುದಿಲ್ಲ, ಬಿಜೆಪಿಯವರು ಒಳ ಮೀಸಲಾತಿ ಜಾರಿಗೊಳಿಸಿದ್ದೆವೆ ಎಂದು ಹೇಳುತ್ತಿದ್ದಾರೆ, ಇದು ದಲಿತರಿಗೆ ಮಾಡುತ್ತಿರುವ ಮಹಾ ವಂಚನೆ. ಕಾರಣ ಎಲ್ಲರಲ್ಲಿ ಜಾಗೃತಿಗೊಳಿಸಬೇಕಿದೆ ಎಂದರು.

ಕರ್ನಾಟಕ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ, ಲಕ್ಷ ಕೋಟಿ ಆಯವ್ಯದಲ್ಲಿ 77 ಸಾವಿರ ಕೋಟಿ ಸಾಲ ಅಂತ ತೋರಿಸಲಾಗಿದೆ, ಅದರಲ್ಲಿ 40 ಪರ್ಸಂಟ್ ಕಮಿಷನ್ ಸಹ ಅದರಲ್ಲಿಯೇ ತೋರಿಸಲಾಗುತ್ತಿದೆ, ರಾಜ್ಯಕ್ಕೆ ಪ್ರವಾಹ ಬಂದಾಗ ಮೋದಿ ಬರ್ಲಿಲ್ಲ, ಭ್ರಷ್ಟಾಚಾರ ನಡೆದು 40 % ಆರೋಪ‌ ಇದ್ದರೂ ಸಹ ಒಂದು ಬಾರಿಯೂ ಕೇಳಲಿಲ್ಲ,
ತೆರಿಗೆ ಹಣದಲ್ಲಿಯೇ ಅವರು ಚುನಾವಣೆ ಮಾಡುತ್ತಿದ್ದಾರೆ, ನಮ್ಮ ಯೋಜನೆಗಳು ಮೋದಿಯವರು 15 ಲಕ್ಷ ಹಣವನ್ನು ಅಕೌಂಟಿಗೆ ಹಾಕ್ತಿವಿ ಅಂತ ಹೇಳಿದ ಹಾಗಲ್ಲ ಎಂದು ಟಾಂಗ್‌ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಬಿ. ಗೋಪಾಲ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಇದ್ದರು.//////