ಸಂಗಮೇಶ್ವರ್ ನಗರ್ ಕರೆಮ್ಮಾ ದೇವಿ ಹಾಗೂ ಬ್ರಹ್ಮ ದೇವರ ಮೂರ್ತಿ ಸ್ಥಾಪನೆ

ಬೆಳಗಾವಿ : ಹುಕ್ಕೇರಿ ತಾಲೂಕಿನ ಕೋಟಬಾಗಿ ಗ್ರಾಮದ ಸಂಗಮೇಶ್ವರ್ ನಗರ್ ಕರೆಮ್ಮಾ ದೇವಿ ಹಾಗೂ ಬ್ರಹ್ಮ ದೇವರ ಮೂರ್ತಿ ಸ್ಥಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ನಿಖಿಲ್ ಉಮೇಶ್ ಕತ್ತಿ ಅವರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಹಾಗೂ ಬಸವರಾಜ್ ಮರಡಿ, ಚಂದ್ರಕಾಂತ್ ಚೌಗಲಾ, ಅರ್ಜುನ್ ಚೌಗಲಾ, ಶಂಕರ್ ಕೋಚರಿ, ಆನಂದ್ ಖಾನಾಪುರಿ,ಶಿವಪ್ಪಾ ಮುತ್ನಾಳಿ, ರಾಜು ಕೋಚರಿ, ಕಲ್ಲಪಾ ಮುತ್ನಾಳಿ, ಬಸಪ್ಪಾ ಚೌಗಲಾ, ಮಲ್ಲಪ್ಪಾ ಜಾಗನೂರಿ ಬಸಗೌಡ ದೇಸಾಯಿ ಹಾಗೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.ಶಿರಗಾಂವಿ ಗ್ರಾಮದಿಂದ ಕಿಲೋಮೀಟರಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಗೂ ಗ್ರಾಮಸ್ಥರು ಕೂಡಿಕೊಂಡು ಅದ್ದೂರಿಯಾಗಿ ವಾಧ್ಯಮೇಳದೊಂದಿಗೆ ಮಹಿಳೆಯರ ಆರತಿ ಪಲ್ಲಕ್ಕಿ ಉತ್ಸವ ಹೀಗೆ ಹಲವಾರು ಪ್ರಮುಖ ಮುಖಂಡರು ಸ್ವಾಮಿಜಿಗಳ ನೆತ್ರತ್ವದಲ್ಲಿ ಕರೆಮ್ಮಾ ದೇವಿ ಹಾಗೂ ಬ್ರಹ್ಮದೇವರ ಗುಡಿಗಳಿಗೆ ಕಳಸಾರೋಹಣ ಮಾಡಿ ಜಾತ್ರೆಯನ್ನ ವಿಶಷ್ಟವಾಗಿ ಆಚರಣೆ ಮಾಡಿದರು.ನಂತರ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು ಗ್ರಾಮದ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿ ಕರೆಮ್ಮಾ ದೇವಿಯ ದರ್ಶನ ಪಡೆದು ಪ್ರಸಾದ ಸ್ವಿಕರಿಸಿ ಪುನಿತರಾದರೂ.