ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಬಿ.ಪಾಟೀಲ್

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಳೆದ 5 ವರ್ಷಗಳಿಂದ ಧರ್ಮದ ಬಗ್ಗೆ ವಿಷಕಾರುವ ಕೆಲಸ ಮಾಡುತ್ತಿದ್ದಾರೆ. ದೇಶದ ಹಿರಿಯ ಮಹಿಳೆ ಸೋನಿಯಾ ಗಾಂಧಿ ಅವರನ್ನು ನಿಂದಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವರ್ತನೆ ಖಂಡನಾರ್ಹ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ಹುಚ್ಚ ಎಂದು ನಿಂದಿಸಿರುವ ಯತ್ನಾಳ, ರಾಜ್ಯದ ಜನ ಇವರ ನಡವಳಿಕೆಯಿಂದ ಏನು ಎನ್ನುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಡು ನೀಡಿದ್ದಾರೆ.
ಪ್ರಧಾನಿ ಆಗುವಂಥ ಎರಡು ಬಾರಿ ಅವಕಾಶ ಸಿಕ್ಕರೂ ಅಧಿಕಾರಕ್ಕಾಗಿ ಆಸೆ ಪಡದೇ ಮನಮೋಹನಸಿಂಗ್ ಅವರನ್ನು ಪ್ರಧಾನಿ ಮಾಡಿದ ತ್ಯಾಗಮಯಿ ಸೋನಿಯಾ ಗಾಂಧಿ. ಇಂಥ ನಾಯಕಿಯನ್ನು ಪಾಕಿಸ್ತಾನ ಏಜೆಂಟ್ ಎಂದು ನಿಂದಿಸಿರುವ ಯತ್ನಾಳಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.//////