Belagavi News In Kannada | News Belgaum

ಪ್ರಧಾನಿ ನರೇಂದ್ರ ಮೋದಿ ನನಗೆ ಸ್ಪೂರ್ತಿ : ಡಾ ರವಿ ಪಾಟೀಲ

 ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಅಭೂತಪೂರ್ವ ಅಭಿವೃದ್ಧಿ ಕಾರ್ಯ ಹಾಗೂ ದೇಶಕ್ಕೆ ಅವರು ನೀಡಿದ ನೇತೃತ್ವ, ದೇಶಪ್ರೀತಿ ನನಗೆ ಮಾದರಿಯಾಗಿದೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಡಾ. ರವಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿ ನಗರದ ರಾಮನಗರದಲ್ಲಿ ಭರ್ಜರಿ ಪ್ರಚಾರ ಕೈಗೊಂಡ ಡಾ. ರವಿ ಪಾಟೀಲ್ ಬೆಳಗಾವಿ ಉತ್ತರ ಕ್ಷೇತ್ರದಲ್ಲೂ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದು ಅದನ್ನು ಸಾಕರ್ ಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿಯೇ ನನಗೆ ಶ್ರೀರಕ್ಷೆ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವ ದೇಶದ ಪ್ರತಿಯೊಬ್ಬ ಪ್ರಜೆಯ ಮನದಲ್ಲಿ ಮನೆ ಮಾಡಿದೆ ಹೀಗಾಗಿ ಪ್ರಚಾರಕ್ಕೆ ಹೋದೆಲ್ಲಡೆ ಮತದಾರರು ಆತ್ಮೀಯ ಸ್ಪಂದನೆ ನೀಡುತ್ತಿದ್ದಾರೆ. ಸ್ವಯಂಪ್ರದಾಯರಾಗಿ ಮುಂದೆ ಬಂದು ಪ್ರಚಾರ ಕಾರ್ಯದಲ್ಲಿ ತೊಡಗುವ ಮೂಲಕ ತಮ್ಮ ಕುಟುಂಬ ವರ್ಗ, ಅಕ್ಕ ಪಕ್ಕದ ಮನೆಯವರು ಹಾಗೂ ತಮ್ಮ ಬಡಾವಣೆಗಳಲ್ಲಿ ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ್ ಹಾಗೂ ಹಿಂದುಗಳ ಕಣ್ಮಣಿ ಮಾಜಿ ಕೇಂದ್ರ ಸಚಿವರು ಹಾಗು ಶಾಸಕ ಬಸವನಗೌಡ ಯತ್ನಾಳ್ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡ ನಂತರ ಮತದಾರ ಬಂಧುಗಳಿಂದ ಅಭೂತಪೂರ್ವ ಸ್ಪಂದನೆ ದೊರಕಿದ್ದು ಪ್ರಚಾರ ಕಾರ್ಯಕ್ಕೆ ಹೊಸ ಉತ್ಸಾಹ ಚೈತನ್ಯ ತುಂಬಿದೆ.

ಈಗಾಗಲೇ ಒಂದು ಹಂತದ ಪ್ರಚಾರ ಕಾರ್ಯ ಸಂಪೂರ್ಣಗೊಂಡಿದ್ದು ಕ್ಷೇತ್ರದ ಬಹುತೇಕ ಮತದಾರರನ್ನು ಭೇಟಿ ಮಾಡಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಬೆಳಗಾವಿ ಉತ್ತರ ಕ್ಷೇತ್ರದ ಹಾಗೂ ರಾಜ್ಯದ ಎಲ್ಲ ನಾಯಕರಿಂದ ವ್ಯಾಪಕ ಸ್ಪಂದನೆ ದೊರಕಿದ್ದು ಗೆಲುವಿನ ಹಾದಿಯನ್ನು ಸುಗಮಗೊಳಿಸಿದೆ.  ಸ್ಥಳೀಯ ನಾಯಕರು ತಾವೇ ಮುಂದಾಳತ್ವ ವಹಿಸಿ ಕ್ಷೇತ್ರದ ಎಲ್ಲ ಬಡಾವಣೆಗಳಲ್ಲಿ ಸ್ವತಂತ್ರವಾಗಿ ತಮ್ಮ ಕಾರ್ಯಕರ್ತರ ಗುಂಪಿನೊಂದಿಗೆ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಹೀಗಾಗಿ ಮುಂಬರುವ ಮೇ 10 ರ ಚುನಾವಣೆಯ ಕುರಿತು ಸ್ಪಷ್ಟ ಚಿತ್ರಣ ದೊರಕುತ್ತಿದ್ದು ಗೆಲುವು ನಿಶ್ಚಿತ ಎನಿಸಿದೆ.

ನಾನು ಇತರ ಪ್ರತಿಪಕ್ಷಗಳ ಅಭ್ಯರ್ಥಿಗಳು ಯಾವ ರೀತಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬುದಕ್ಕಿಂತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಹಾಗೆಯೇ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪನವರ ನೇತೃತ್ವ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದೆ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇನೆ ಹೊರತು ವಿರೋಧಿಗಳ ಕುರಿತು ಚಿಂತಿಸಲು ಸಮಯವಿಲ್ಲ. ವಿರೋಧಿಗಳತಂತ್ರ ಕುತಂತ್ರಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಭಾರತೀಯ ಜನತಾ ಪಾರ್ಟಿಯ ಪ್ರಚಾರದ  ತೀವ್ರತೆಯೇ ಬೇರೆ ಯಾಗಿದೆ. ಮತದಾರರನ್ನು ಮನೆಮನೆಗೆ ತೆರಳಿ ಭೇಟಿ ಮಾಡುವುದು ನನ್ನ ಮೂಲ ಉದ್ದೇಶ ಹೀಗಾಗಿ ಪ್ರಚಾರ ಕಾರ್ಯದಲ್ಲಿ ಈ ಕುರಿತು ಗಮನಹರಿಸುತ್ತಿದ್ದೇನೆ.

ಭಾರತೀಯ ಜನತಾ ಪಕ್ಷ ಸರ್ಕಾರ ನೀಡಿದ ಸ್ವಚ್ಛ ಆಡಳಿತ ಜನಸಾಮಾನ್ಯನ ಮೆಚ್ಚುಗೆಗೆ ಪಾತ್ರವಾಗಿದೆ ಹೀಗಾಗಿಯೇ ಮತದಾರರಿಂದ ಇಂತಹ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಮತದಾರು ತೋರಿಸುತ್ತಿರುವ ಪ್ರೀತಿ ಅಭಿಮಾನ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದು ಡಾ. ರವಿ ಪಾಟೀಲ್ ತಿಳಿಸಿದರು.

ಶನಿವಾರ ಬೆಳಗ್ಗೆ ನಗರದ ಮಾಲಿನಿ ನಗರ ರೆವೆನ್ಯೂ ಕಾಲೋನಿ, ನ್ಯೂ ರೇಣುಕಾ ನಗರ ಸುತ್ತಮುತ್ತಲ ಬಡಾವಣೆಗಳು ಅಶೋಕನಗರ ಸುತ್ತಮುತ್ತಲ ಬಡಾವಣೆಗಳು ರಾಮನಗರ ಸೇರಿದಂತೆ ಕ್ಷೇತ್ರದ ಅನೇಕ ಬಡಾವಣೆಗಳಲ್ಲಿ ಪ್ರಚಾರ ಕಾರ್ಯಕ್ರಮ ಕೈಗೊಂಡಿದ್ದೇವೆ ಈ ಪ್ರಚಾರ ಕಾರ್ಯ ಇನ್ನು ತೀವ್ರತೆ ಪಡೆಯಲಿದೆ ರಾಜ್ಯದ ಹಿರಿಯ ನಾಯಕರ ಪ್ರಚಾರದ ಬಳಿಕ ರಾಷ್ಟ್ರ ನಾಯಕರು ಪ್ರಚಾರ ಮಾಡುವ ಎಲ್ಲ ನಿರೀಕ್ಷೆಗಳಿವೆ. ರಾಜ್ಯದಲ್ಲಿ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಚಾರ ಕಾರ್ಯ ಕೈಗೊಂಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥಜಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ಮಾಡುವಂತೆ ವಿನಂತಿಸಿಕೊಂಡಿದ್ದೇನೆ. ಸದ್ಯದರಲ್ಲಿಯೇ ಅವರ ಬರುವಿಕೆ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.

ಮೇ 10 ರ ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಬೆಳಗಾವಿಯಲ್ಲಿ ನೂರಕ್ಕೆ ನೂರರಷ್ಟು ಶೇಕಡ ಮತದಾನ ಆಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬ ಮತದಾರರೂ ಮತದಾನ ಮಾಡಿ ಪ್ರಜಾಪ್ರಭುತ್ವದ ಬೇರುಗಳನ್ನು ಸುಭದ್ರ ಪಡಿಸಬೇಕಾಗಿದೆ.

ಬೆಳಗಾವಿ ಉತ್ತರ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಅಭ್ಯರ್ಥಿ ಆಗಿರುವ ಡಾ. ರವಿ ಪಾಟೀಲ ಶನಿವಾರ ಮಾಲಿನ ನಗರ, ಹೊಸ ರೇಣುಕಾ ನಗರ, ಅಶೋಕ ನಗರ, ಕ್ಲಬ್‌ ರೋಡ, ಶಾಹು ನಗರ, ಜಯ ನಗರ, ಮಹಾಬಲೇಶ್ವರ ನಗರ, ಕುವೆಂಪು ನಗರ, ಮುರಳೀಧರ ಕಾಲನಿ ಸೇರಿದಂತೆ ಕ್ಷೇತ್ರದ ಹಲವು ಬಡಾವಣೆಗಳಲ್ಲಿ ಮತದಾರರನ್ನು ಮನೆ ಮನೆಗೆ ತೆರಳಿ ಮೇ ೧೦ರ ಚುನಾವಣೆಯಲ್ಲಿ ತಾವರೆ ಚಿಹ್ನೆಗೆ ಮತ ನೀಡಿ ಬೆಳಗಾವಿ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಬೇಕು ಎಂದು ವಿನಂತಿಸಿದರು. ಪ್ರಚಾರ ಕರ್ಯದಲ್ಲಿ ಕಾರ್ಪೊರೇಟರ ಮಹದೇವ ರಾಥೋಡ, ಮುರಗೇಂದ್ರಗೌಡ ಪಾಟೀಲ, ದಿಗ್ವಿಜಯ ಸಿದ್ನಾಳ, ಈರಯ್ಯ ಖೋತ, ದೀಪಕ ಶೆಟ್ಟಿ, ಅಣ್ಣಾಸಾಹೆಬ ದೇಸಾಯಿ, ಮಹಾದೇವ ಹಿರೇಮಠ, ಆರತಿ ಪಾಟೋಳೆ, ಶಿಲ್ಪಾ ಕೇಕಾರೆ, ಪ್ರಸಾದ ದೇವರಮನಿ ಸೇರಿದದಂತೆ ದೊಡ್ಡ ಸಂಖ್ಯೆಯಲ್ಲಿ ಬಿಜೆಪ ಕಾರ್ಯಕರ್ತರು ಪಾಲ್ಗೊಂಡಿದ್ದರು.//////