Belagavi News In Kannada | News Belgaum

ಚಿಕ್ಕೋಡಿ ಮತಕ್ಷೇತ್ರದಲ್ಲಿ ಗೆಲುವಿನ ಹಾರ ಯಾರಿಗೆ?

ಕಾಂಗ್ರೆಸ್ ನ ಭದ್ರಕೋಟೆಯ ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಈ ಕ್ಷೇತ್ರದಿಂದ ಮಾಜಿ ಸಂಸದ ಬಿಡಿಸಿಸಿ ಬ್ಯಾಂಕನ ಅಧ್ಯಕ್ಷ ರಮೇಶ ಕತ್ತಿ ಬಿಜೆಪಿಯಿಂದ ಕಣಕ್ಕೆ ಇಳದಿದ್ದಾರೆ.ಇದರಿಂದಾಗಿ ಚಿಕ್ಕೋಡಿ ಕ್ಷೇತ್ರದಲ್ಲಿ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದಾಗಿ ಕೂಡಿದೆ.
ಚಿಕ್ಕೋಡಿ ಕ್ಷೇತ್ರದಿಂದ ಕಳೆದ ಬಾರಿ ಗಣೇಶ ಹುಕ್ಕೇರಿ ಬಿಜೆಪಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ಗಣೇಶ ಅವರಿಗೆ ಬಿಜೆಪಿಯಿಂದ ಮಾಜಿ ಸಂಸದ ರಮೇಶ ಕತ್ತಿ ಪ್ರತಿಸ್ಪರ್ಧಿ.ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ ಹುಕ್ಕೇರಿ ಹಾಗೂ ಅವರ ತಂದೆ ಪ್ರಕಾಶ ಹುಕ್ಕೇರಿ ಅಪಾರ ಅಭಿಮಾನ‌ ಬಳಗ ಹೊಂದಿದ್ದಾರೆ. ಬಿಜೆಪಿಗೆ ಕಾರ್ಯಕರ್ತರ ಕೊರತೆಯಿದೆ. ರಮೇಶ ಕತ್ತಿ ಹುಕ್ಕೇರಿ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿದ್ದಾರೆ.ಚಿಕ್ಕೋಡಿ ಯಲ್ಲಿ ಬಿಜೆಪಿ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿದೆ.
ಬಿಜೆಪಿಗೆ ಪ್ಲಸ್
ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ತನ್ನದೇ ಅಭಿಮಾನ ಬಳಗ ಹೊಂದಿರುವದು.
ಜೊಲ್ಲೆ ಕುಟುಂಬ ಹಾಗೂ ಕವಟಗಿಮಠ ಕ್ಕ್ಷೇತ್ರದಲ್ಲಿ ರಾಜಕಾರಣದಲ್ಲಿ ಸಕ್ರೀಯವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಜನರಿಗೆ ಮನವರಿಕೆ.
ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದರಿಂದ ಸಹಜವಾಗಿಯೆ ಬಿಜೆಪಿಗೆ ಅನುಕೂಲ.
ಬಿಜೆಪಿಗೆ ಮೈನಸ್
ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದಾಗಿ ಬೇಸತ್ತ ಜನತೆ.
ಸದಲಗಾ ಭಾಗದಲ್ಲಿ ಪ್ರಕಾಶ ಹುಕ್ಕೇರಿ ಪ್ರಭಾವ ಬಹಳವಿದೆ.
ಹೀಗಾಗಿ ಬಿಜೆಪಿಗೆ ಬರುವ ಮತಗಳು ಇಬ್ಭಾಗವಾಗುವ ಸಾದ್ಯತೆ.ಕಾಂಗ್ರೇಸ್ ಪ್ಲಸ್
ವಿಧನಸಭಾ ಹಾಗೂ ಪರಿಷತ್ ತಂದೆ ಮಕ್ಕಳ ಆಯ್ಕೆ.
ಪ್ರಕಾಶ ಹುಕ್ಕೇರಿ ವರ್ಚಸ್ಸು.
ಗಣೇಶ ಹುಕ್ಕೇರಿ ವರ್ಚಸ್ಸು.
ಕ್ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಸಹಾಯಕ.
ಕಾರ್ಯಕರ್ತರಿಗೆ ಸುಲಭವಾಗಿ ಲಭ್ಯವಾಗುವ ನಾಯಕರು.
ಕಾಂಗ್ರೇಸ್ ಮೈನಸ್
ಕುಟುಂಬ ರಾಜಕಾರಣದಿಂದ ಬೇಸತ್ತ ಜನರು ಬೇರೆ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಸಾಧ್ಯತೆ.
ಬಹಳ ವರ್ಷಗಳಿಂದ ಒಂದೇ ಕುಟುಂಬಕ್ಕೆ ಸೀಮಿತವಾಗಿರುವ ಅಧಿಕಾರ.
ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿಯನ್ನು ಹೊರತುಪಡಿಸಿ ಮತ್ತೊಂದು ಉಪವಿಭಾಗ ಮತ್ತು ಮತ್ತೊಂದು ಲೋಕಸಭಾ ಕ್ಷೇತ್ರದ ಹೆಸರೇ ಚಿಕ್ಕೋಡಿ ಇಲ್ಲಿಂದ ಸತತವಾಗಿ ಆರಿಸಿ ಬರುತ್ತಿರುವುದು ಪ್ರಕಾಶ ಹುಕ್ಕೇರಿ ಈ ಹಿಂದಿನ ಲೋಕಸಭೆಗೆ ಪ್ರಕಾಶ ಹುಕ್ಕೇರಿಯವರು ಸ್ಪರ್ದೇ ಮಾಡಿದ್ದರಿಂದ ಅವರಿಂದ ತೆರವಾದ ಕ್ಷೇತ್ರದಕ್ಕೆ ಅವರ ಮಗ ಗಣೇಶ ಹುಕ್ಕೇರಿಯವರನ್ನು ನಿಲ್ಲಸಿದ್ದರು ಗಣೇಶ ಹುಕ್ಕೇರಿಯವರೂ ಸಹ ಸತತ ಎರಡು ಬಾರಿ ಈ ಮತಕ್ಷೇತ್ರ ದಿಂದ ತಂದೆಯಂತೆ ಆರಿಸಿ ಬಂದಿದ್ದಾರೆ. ಚಿಕ್ಕೋಡಿಯಲ್ಲಿಯೇ ಪ್ರಭಾವಿ ಬಿಜೆಪಿ ನಾಯಕರಿದ್ದರೂ ಸಹ ಈವರೆಗೂ ಚಿಕ್ಕೋಡಿ ವಿಧಾನಸಭೆ ಮತಕ್ಷೇತ್ರವನ್ನು ಕಾಂಗ್ರೆಸ್ ನಿಂದ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಆಗಿಲ್ಲ.‌.
ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ಹೆಚ್ಚು ಬಾಧಿತವಾಗುವ ಗ್ರಾಮಗಳಿರುವ ಮತಕ್ಷೇತ್ರ ಮತ್ತು ತಾಕೂಕು ಎಂದರೇ ತಪ್ಪಾಗಲಾರದು. ಪ್ರತಿಬಾರಿಯೂ ಕೃಷ್ಣೆಗೆ ಪ್ರವಾಹ ಅಪ್ಪಳಿಸಿದಾಗ ಸಾವಿರಾರು ಜನ ಅಕ್ಷರಶಃ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಗುತ್ತೆ. ಹೀಗಿದ್ದರೂ ಸಹ ಇಲ್ಲಿ ಪ್ರಕಾಶ ಹುಕ್ಕೇರಿ ಕಳೆದ ೫ ಬಾರಿ ಆರಿಸಿ ಬಂದು ಸಚಿವರಾಗಿದ್ದರು. ನಂತರ ಅವರ ಮಗ ಗಣೇಶ ಹುಕ್ಕೇರಿ ಎರಡು ಬಾರಿ ಆರಿಸಿ ಬಂದು ಈಗ ಮೂರನೇ ಬಾರಿಗೆ ತಮ್ಮ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ..
ಕಾಂಗ್ರೇಸ್ ಹಾಗೂ ಬಿಜೆಪಿಗೆ ಇಲ್ಲಿ ಸಮಬಲವಿದ್ದರೂ ಸಹ ಪ್ರಕಾಶ ಹುಕ್ಕೇರಿಯವರು ಕ್ಷೇತ್ರದಾದ್ಯಂತ ಮಾಡಿರುವ ಅಭಿವೃದ್ದಿ ಕೆಲಸಗಳು ಹಾಗೂ ಜನರಿಗೆ ಸ್ಪಂಧಿಸುವ ರೀತಿಯಿಂದ ಜನ ಹುಕ್ಕೇರಿ ಮನೆತನಕ್ಕೆ ಮಣೆ ಹಾಕ್ತಾರೆ ಎಂಬ ಮಾತಿದೆ. ಮೀಸೆ ಮಾವ ಎಂದೇ ಪ್ರಖ್ಯಾತಿ ಹೊಂದಿರುವ ಪ್ರಕಾಶ ಹುಕ್ಕೇರಿಯವರ ಅಭಿವೃದ್ದಿ ದೃಷ್ಠಿಕೋಣ ಕಳೆದ ಎರಡು ಚುನಾವಣೆಗಳಲ್ಲಿ ಅವರ ಮಗ ಗಣೇಶ ಹುಕ್ಕೇರಿಯವರ ಕೈ ಹಿಡಿದಿವೆ.‌ಒಂದು ವೇಳೆ ಸಮರ್ಥ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದರೆ ಕಾಂಗ್ರೇಸ್ ಕೋಟೆ ಬಿಜೆಪಿಗೆ ಕೈ ಸೇರುತ್ತೆ ಎಂಬ ಲೆಕ್ಕಾಚಾರಗಳಿದ್ದರೂ ಸಹ ಈ ವರೆಗೂ ಅದು ಸಾಧ್ಯವಾಗಿಲ್ಲ..
ಈಗಾಗಲೇ ಒಂದು ಬಾರಿ ಅಣ್ಣಾಸಾಹೇಬ್ ಜೊಲ್ಲೆ ಮತ್ತೊಂದು ಬಾರಿ ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಇಬ್ಬರೂ ಸಹ ತಂದೆ ಪ್ರಕಾಶ ಹುಕ್ಕೇರಿ ಹಾಗೂ ಮಗ ಗಣೇಶ ಹುಕ್ಕೇರಿ ವಿರುದ್ದ ಪರಾಭವಗೊಂಡಿದ್ದಾರೆ. ಹೇಳಿಕೊಳ್ಳುವ ಬ್ಯುಸಿನೆಸ್ ಲಾಭಿ, ಇಲ್ಲದಿದ್ದರೂ ಸಹ ಕ್ಷೇತ್ರದಾದ್ಯಂ ಪ್ರಕಾಶ ಹುಕ್ಕೇರಿಯವರ ಹಿಡಿತ ವರ್ಕೌಟ್ ಆಗ್ತಿದೆ ಎನ್ನುವುದು ಒಂದು ವಿಶ್ಲೇಷಣೆ
ಒಟ್ಟಿನಲ್ಲಿ ಅಭಿವೃದ್ದಿ ಕೆಲಸಗಳು ಮಾತ್ರ ಹುಕ್ಕೇರಿ ಮನೆತನದ ಕೈ ಹಿಡಿದಿವೆ ಎನ್ನುವುದು ರಾಜಕೀಯ ಪಂಡಿತರ ವಾದ..ಅಂತಿಮವಾಗಿ ಫಲಿತಾಂಶ ಎನ್ನಾಗುತ್ತದೆ ಕಾದುನೋಡಬೇಕಾಗಿದೆ.