Belagavi News In Kannada | News Belgaum

ಅಭ್ಯರ್ಥಿ ಸಂತೋಷ ಕೆಂಪ ಬೆಳಗಾವಿ ದಕ್ಷಿಣ ಕ್ಷೆತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ರಾಷ್ಟ್ರೀಯ ಪಕ್ಷಗಳಿಗೆ ಶೆಡ್ಡು ಹೊಡೆಯಲು ಮುಂದಾದ ಗನ್ನಾ ಕಿಸಾನ್ ಚಿಹ್ನೆಯ ಅಭ್ಯರ್ಥಿ ಸಂತೋಷ

ಬೆಳಗಾವಿ: ವಿಧಾನ ಸಭೆ ಚುನಾವಣೆ ಹಿನ್ನಲೆ ವಿಶೆಷವಾದ ಬಾಂಡ ಮೂಲಕ ಮತದಾರರಿಗೆ ಪ್ರಣಾಳಿಕೆ ಹಂಚುತ್ತಿರುವ ಸ್ವತಂತ್ರ ಅಭ್ಯರ್ಥಿ ಸಂತೋಷ ಕೆಂಪ ಬೆಳಗಾವಿ ದಕ್ಷಿಣ ಕ್ಷೆತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ರಾಷ್ಟ್ರೀಯ ಪಕ್ಷಗಳಿಗೆ ಶೆಡ್ಡು ಹೊಡೆಯಲು ಮುಂದಾದ ಗನ್ನಾ ಕಿಸಾನ್ ಚಿಹ್ನೆಯ ಅಭ್ಯರ್ಥಿ ಸಂತೋಷ ಕೆಂಪ.ಹೌದು ಬೆಳಗಾವಿ ಜಿಲ್ಲೆಯ ನಗರದಲ್ಲಿ ಪ್ರತಿಜ್ನಾ ವಿಧಿ ಮಾಡಿ ಮತದಾರರ ಮನವೊಲಿಸಲು ಮುಂದಾಗಿದ್ದಾರೆ ಮೂಲತಃ ಸಂತೋಷ ಸಾಮಾಜಿಕ ಕಾರ್ಯಾಕರ್ತರು ಸಾಮಾಜಿಕ ಕಳಕಳಿ ಉಳ್ಳವರು,ದಕ್ಷಿಣ ಕ್ಷೇತ್ರದಲ್ಲಿ ಅಭಿವ್ರದ್ದಿಯಲ್ಲಿ ಇನ್ನೂ ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ.ಎಂದು ಮಾದ್ಯಮದ ಮುಂದೆ ಮಾತನಾಡಿ.ನಾನು ಬಾಂಡ ಮಾಡಿದ್ದೆನೆ ಎಲ್ಲರ ಹಾಗೇ ಸುಳ್ಳು ಪ್ರಣಾಳಿಕೆಯನ್ನ ಬಿಡುಗಡೆ ಮಾಡಿಲ್ಲ ಬಾಂಡ ಮೂಲಕ ಮತದಾರರಿಗೆ ಪ್ರಣಾಳಿಕೆ ಹಂಚುತ್ತಿದ್ದೆನೆ ಮನೆ ಮನೆಗೆ ಹೋಗಿ ಪ್ರಚಾರ ನಡೆಸಿದ್ದೆನೆ ಎಂದು ಹೆಳಿದರು. ಸಿದ್ದಪ್ಪ ಕೆಂಪ, ವಯಸ್ಸು: 37 ವರ್ಷ, ಉದ್ಯೋಗ: ಕೃಷಿ, ಸಾ: ಮುತ್ಯಾನಟ್ಟಿ ಗ್ರಾಮ ತಾ:/ಜಿ: ಬೆಳಗಾವಿ, ಆದ ನಾನು ಈ ಹೊತ್ತು ಬೆಳಗಾವಿಯಲ್ಲಿ ಸತ್ಯ ಪ್ರತಿಜ್ಞೆಯ ಮೂಲಕ ಪ್ರಮಾಣೀಕರಿಸುವುದೇನೆಂದರೆ,
ಪ್ರತಿಜ್ಞಾ ಪತ್ರ
ನಾನು ಕರ್ನಾಟಕ ಸಾರ್ವತ್ರಿಕ ವಿಧಾನ ಸಭೆ ಚುನಾವಣೆ 2023 ರ ಬೆಳಗಾವಿ ದಕ್ಷಿಣ ವಿಧಾನ ಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ನನ್ನ ಚಿಹ್ನೆ “ಗನ್ನಾ ಕಿಸಾನ” ಆಗಿದೆ.
ಒಂದು ವೇಳೆ ನಾನು ಈ ಚುನಾವಣೆಯಲ್ಲಿ ಜಯಶಾಲಿಯಾದಲ್ಲಿ, ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ ಅಲ್ಲದೆ ನಾನು ನನ್ನ ಅವಧಿಯಲ್ಲಿ ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸುತ್ತೇನೆ.
ಒಂದು ವೇಳೆ ನಾನು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಲ್ಲಿ ನಾನು ಭಾರತೀಯ ದಂಡ ಸಂಹಿತೆ ಪ್ರಕರಣ 191, 193, 195 ಮತ್ತು 199 ಸುಳ್ಳು ಪ್ರತಿಜ್ಞಾ ಪತ್ರ ನೀಡಿದ್ದೇನೆಂದು ನಾನು ಕಾನೂನಿನ ಪ್ರಕಾರ ಶಿಕ್ಷೆಗೆ ಬಾಧ್ಯಸ್ಥನಾಗಿರುತ್ತೇನೆ ಅಂತಾ ಮಾಡಿದ ಪ್ರತಿಜ್ಞಾ ಪತ್ರ
ಈ ಮೇಲಿನ ಪ್ರತಿಜ್ಞಾ ಪತ್ರದಲ್ಲಿನ ಎಲ್ಲ ಅಂಶಗಳು ನನ್ನ ನಂಬಿಕೆ ಮತ್ತು ವಿಶ್ವಾಸದ ಮೇರೆಗೆ ನಿಜ ಹಾಗೂ ಸತ್ಯ ಇರುತ್ತದೆ ಅಂತಾ ಮಾಡಿರುವ ಪ್ರತಿಜ್ಞಾ ಪತ್ರ,
ಸ್ಥಳ: ಬೆಳಗಾವಿ ಪ್ರತಿಜ್ಞಾಧಾರ ಸಹಿ ಮಾಡಿ ವಿಶೆಷವಾಗಿ ಮತದಾರರ ಮನಸೆಳೆದಿದ್ದಾರೆ.ವರದಿ ರಾಜಶೇಖರ ನಾಯಿಕ ಮುಸ್ಸಂಜೆ ನುಡಿ ದಿನಪತ್ರಿಕೆ.