ದೇಶದ ಮೂಲ ಸಂಸ್ಕೃತಿ ಹಾಗೂ ನಮ್ಮನ್ನು ನಾವು ರಕ್ಷಿಸಬೇಕಾಗಿದೆ : ಡಾ. ರವಿ ಪಾಟೀಲ್

ಬೆಳಗಾವಿ : ಯಾರು ನಮ್ಮನ್ನ ರಕ್ಷಣೆ ಮಾಡುತ್ತಿದ್ದಾರೆ ಅವರ ಬಾಹುಗಳನ್ನು ಬಲಪಡಿಸುವ ಮೂಲಕ ನಮ್ಮ ದೇಶದ ಮೂಲ ಸಂಸ್ಕೃತಿ ಹಾಗೂ ನಮ್ಮನ್ನು ನಾವು ರಕ್ಷಿಸಬೇಕಾಗಿದೆ. ಆದ್ದರಿಂದ ಮತದಾತರೆಲ್ಲರೂ ಮೇ 10 ರಂದು ತಮ್ಮ ಪರ ಮತ ಚಲಾಯಿಸಬೇಕು ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಧಿಕೃತ ಅಭ್ಯರ್ಥಿ ಡಾ. ರವಿ ಪಾಟೀಲ್ ಹೇಳಿದರು.
ರವಿವಾರ ಬೆಳಗ್ಗೆ ತಮ್ಮ ಚುನಾವಣಾ ಪ್ರಚಾರ ಆಂದೋಲನದ ಅಂಗವಾಗಿ ಬೆಳಗಾವಿ ಶ್ರೀನಗರ ಶ್ರೀ ಸಾಯಿ ದೇವಸ್ಥಾನ ಹಾಗೂ ಆಂಜನೇಯ ನಗರದ ಗುರುದತ್ತ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮತದಾದರೊಂದಿಗೆ ನಡೆದ ಚಾಯ್ ಪೆ ಚರ್ಚಾ ಸಂವಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದರೆ ಸಮಾಜದ ಜನರು ಪ್ರತಿಯೊಬ್ಬರು ತಮ್ಮ ಮತ ಚಲಾವಣೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಆದ್ದರಿಂದ ಎಲ್ಲ ಮತಭಾಂದವರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮತ ಚಲಾಯಿಸಬೇಕೆಂದು ವಿನಂತಿಸಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೇಶದ ಜನರನ್ನು, ದೇಶದ ಮೂಲ ಸಂಸ್ಕೃತಿಯನ್ನು ರಕ್ಷಿಸಲು ಅವಿರತ ಶ್ರಮ ವಹಿಸುತ್ತಿದ್ದಾರೆ ದೇಶವನ್ನು ಹಾಗೂ ದೇಶದ ಮೂಲ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಾಹುಗಳನ್ನು ಇನ್ನೂ ಬಲಪಡಿಸಬೇಕಾಗಿದೆ ಆದಕಾರಣ ಎಲ್ಲ ಮತದಾದರು ಮೇ 10 ರ ಚುನಾವಣೆಯಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ತಮ್ಮಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ದೇಶದ ಮೂಲ ಸಂಸ್ಕೃತಿ ರಕ್ಷಣೆಯಲ್ಲಿ ಯಾವುದೇ ಲೋಪ ಆಗಬಾರದು ಮತದಾರರು ಮತದಾನದಿಂದ ದೂರ ಉಳಿಯುವ ಮೂಲಕ ಇಂತಹ ಅಜಾಗರೂಕಥೆಗೆ ನಾಂದಿ ಹಾಡಿದಂತಾಗುತ್ತದೆ. ಮತದಾನದಿಂದ ಯಾರು ವಂಚಿತರಾಗಬಾರದು ಎಂದು ಎಚ್ಚರಿಸಿದರು. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಮತದಾನ ನಡೆಯಬೇಕಿದೆ ಈ ನಿಟ್ಟಿನಲ್ಲಿ ಎಲ್ಲರೂ ಸ್ಪಂದಿಸಬೇಕಾಗಿದೆ ಆ ಮೂಲಕ ದೇಶವನ್ನು ಹಾಗೂ ತಾವು ನೆಲೆಸುವ ಕ್ಷೇತ್ರವನ್ನು ಸುರಕ್ಷಿತಗೊಳಿಸಬೇಕಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಶ್ರೀ ಸಾಯಿ ಮಂದಿರದಲ್ಲಿ ದರ್ಶನ ಪಡೆದು ಆಶೀರ್ವಾದ ಪಡೆದರು. ನಂತರ ಆಂಜನೇಯ ನಗರದ ಶ್ರೀ ದತ್ತ ಮಂದಿರದಲ್ಲಿ ವಿಜಯದ ಸಂಕಲ್ಪ ಪೂಜೆ ಮಾಡುವ ಮೂಲಕ ಮತಯಾಚನೆ ನಡೆಸಿದರು. ಸಮಯದ ಕೊರತೆಯಿಂದಾಗಿ ಪ್ರತಿಯೊಬ್ಬ ಮತದಾರರ ಮನೆ ಮನೆಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಕ್ಷಮೆ ಇರಲಿ ಎಂದು ವಿನಮ್ರವಾಗಿ ಬೇಡಿಕೊಂಡರು. ಈ ಸಂದರ್ಭದಲ್ಲಿ ಶ್ರೀನಗರದ ಹಲವು ಬಡಾವಣೆಗಳಲ್ಲಿ ಭೇಟಿ ನೀಡಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ ರವಿ ಪಾಟೀಲ್ ಅವರಿಗೆ ಈಗಾಗಲೇ ಬಹುತೇಕ ಸಂಘಟನೆಗಳು, ಮಹಿಳಾ ಮಂಡಲಗಳು, ಆಟೋ ಚಾಲಕರ ಸಂಘಗಳು, ಕಲಾವಿದರ ಸಂಘಟನೆಗಳು, ಕೃಷಿಕರು, ಕಾರ್ಮಿಕರ, ವ್ಯಾಪಾರಸ್ಥರ, ವಿದ್ಯಾರ್ಥಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಪ್ರಚಾರ ಕಾರ್ಯಕ್ಕೆ ಹಾಗೂ ಬಿಜೆಪಿ ಅಭ್ಯರ್ಥಿಗೆ ಭಾರಿ ಸ್ಪಂದನೆ ಬೆಂಬಲ ದೊರೆತಿದೆ. ಮತದಾತರೇ ಅಭ್ಯರ್ಥಿ ಡಾ. ರವಿ ಪಾಟೀಲ್ ಅವರನ್ನು ಆತ್ಮೀಯವಾಗಿ ಗೌರವದಿಂದ ಬರಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ.
ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ಪ್ರಚಾರ ಮಾಡಲಾಯಿತು, ಮತದಾರರು ಸ್ವಯಂ ಪ್ರೇರಿತವಾಗಿ ಪ್ರಚಾರದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮದಿಂದ ಸ್ವಾಗತಿಸಿದರು.ಮತ್ತು ಡೊಳ್ಳು ಬಾರಿಸುವ ಮೂಲಕ ಸಂಭ್ರಮದ ವಾತಾವರಣದಲ್ಲಿ ಪ್ರಚಾರ ನಡೆಸಲಾಯಿತು. ಈ ಸಮಯದಲ್ಲಿ ಮತದಾರರು ತೋರಿಸಿದ ಪ್ರೀತಿಗೆ ಮತ್ತು ನನಗೆ ಬೆಂಬಲ ನೀಡಿದ ಮತದಾರರಿಗೆ ಧನ್ಯವದಗಳು. ಬರುವ ಚುನಾವಣೆಯಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚಿನ ಬಹುಮತದ ಅಂತರದಿಂದ ಡಾ. ರವಿ ಪಾಟೀಲ್ ಗೆಲುವು ದಾಖಲಿಸಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ಗೆಲುವನ್ನು ಎಲ್ಲ ಮತದಾರರು ಸಾಕಾರ ಗೊಳಿಸಬೇಕಾಗಿದೆ. ಕ್ಷೇತ್ರದ ಕಂಗ್ರಾಳಿ, ಹಿಂಡಾಲ್ಕೊ ಕ್ವಾಟರ್ಸ ನಲ್ಲಿ ಸಹ ಮನೆ ಮೆನೆಗೆ ತೆರಳಿ ಪ್ರಚಾರ ಮಾಡಲಾಯಿತು.
ಶಾಸಕ ಅನಿಲ್ ಬೆನಕೆ, ಮುರಗೇಂದ್ರಗೌಡ ಪಾಟೀಲ, ವಿಲಾಸ ಪವಾರ, ಬೆಳಗಾವಿ ಪಾಲಿಕೆಯ ಆಡಳಿತ ಪಕ್ಷದ ನಾಯಕ ರಾಜಶೇಖರ ದೋಣಿ, ವಕೀಲರಾದ ವಿಜಯ ಪಾಟೀಲ್, ವಿರೂಪಾಕ್ಷ ದೊಡ್ಡಮನಿ, ಮಹಾಂತೇಶ್ ಹಿರೇಮಠ್, ಉಮೇಶ್ ಕತ್ತಿ, ಮಹಾಂತೇಶ್ ಮೂಲಿಮನಿ, ಅರುಣ್ ಮರಾಠೆ ಮುಂತಾದವರು ಉಪಸ್ಥಿತರಿದ್ದರು.//////