Belagavi News In Kannada | News Belgaum

ಖಾನಾಪುರ ಕ್ಷೇತ್ರದಲ್ಲಿ ಭರ್ಜರಿ ಮತ ಭೇಟಿ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ವಿಠಲ ಹಲಗೆಕರ್

ಬೆಳಗಾವಿ : ಖಾನಾಪುರ್ ಮತಕ್ಷೇತ್ರದ ಅಧಿಕೃತ ಬಿಜೆಪಿ ಅಭ್ಯರ್ಥಿ ವಿಠ್ಠಲ್ ಹಾಲಿಗೆಕರ್ ವಿವಿಧ ಗ್ರಾಮಗಳಾದ ಚೋರ್ಲಾ, ಚಿಗುಳೆ, ಮನ್, ಕಣಕುಂಬಿ, , ಪರ್ವಾಡ, ಗವಳಿವಾಡೆ, ಬೆಟ್ನೆ, ಚಿಖಲೆ, ಗಾವಸೆ, ಆಮ್ಟೆ, ಕಲಮನಿ ಗ್ರಾಮಗಳಿಗೆ ಬಿಜೆಪಿ ಅಭ್ಯರ್ಥಿ ವಿಠ್ಠಲ್ ಹಾಲ್ಗೇಕರ ಪ್ರಚಾರ ಸಭೆ ನಡೆಸಿ ಭರ್ಜರಿ ಮತಯಾಚನೆ ನಡೆಸಿದರು.

ಅವರಿಗೆ ಸಾತ್ ನೀಡಿದ ಖಾನಾಪುರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಒಳ್ಳೆಯ ಒಡನಾಟ ಇಟ್ಟುಕೊಂಡಿರುವ ಧನ್ಯಶ್ರೀ ಸರದೇಸಾಯಿ ಹಾಗೂ ಮಾಜಿ ಶಾಸಕ ಅರವಿಂದ್ ಪಾಟೀಲ್ ಜೊತೆಗೂಡಿ ಮತದಾರರ ಸಭೆಗಳನ್ನು ನಡೆಸಿ ಭರ್ಜರಿ ಮತ ಬೇಟೆ ಮಾಡಿದರು ಈ ಸಮಯದಲ್ಲಿ ಖಾನಾಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮುಖಂಡರುಗಳು ಸಾತ್ ನೀಡಿದರು.