ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರೆ ಪರವಾಗಿ ರೋಡ್ ಶೋ ನಡೆಸಲಿರುವ ನಟ ಕಿಚ್ಚ ಸುದೀಪ್

ಬೆಳಗಾವಿ : 2023 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಸ್ಟಾರ್ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ಇಂದು ಯಮಕನಮರಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಮತಯಾಚನೆ ಮಾಡಲಿದ್ದಾರೆ.
(ಸೋಮವಾರ). ಇಂದು ಸಾಯಂಕಾಲ 4 ಗಂಟೆಗೆ ಹೊಸ ವಂಟಮೂರಿ ಗ್ರಾಮದಲ್ಲಿ ರೋಡ್ ಶೋ ಮುಖಾಂತರ ಪ್ರಚಾರ ಆರಂಭವಾಗಲಿದ್ದು, ಅದೇ ರೀತಿ ಬೆಳಗಾವಿ ಜಿಲ್ಲೆಯ ಕೆಲ ಮತಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆಂದು ತಿಳಿಯಲಾಗಿದೆ ಹಾಗೂ ಯಮಕನಮರಡಿ ಕ್ಷೇತ್ರದಲ್ಲಿ ಅಲ್ಲಿಂದ ಪಾಶ್ಚಾಪೂರ ಗ್ರಾಮದ ವರೆಗೆ ರ್ಯಾಲಿ ಮುಖಾಂತರ ಮತಯಾಚನೆ ನಡೆಯಲಿದೆ.
ಅಭಿಮಾನಿ ಹಾಗೂ ಅಭ್ಯರ್ಥಿ ಪರ ಮತಯಾಚನೆ ಮಾಡಲಿರುವ ಕಿಚ್ಚ..!: ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಕಿಚ್ಚ ಸುದೀಪ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ.
ಈಗ ಅವರು ಮೊದಲ ಬಾರಿಗೆ ರಾಜಕೀಯ ಚುನಾವಣೆ ಎದುರಿಸುತ್ತಿದ್ದು, ಇದೆ ಸಂದರ್ಭದಲ್ಲಿ ಕಿಚ್ಚ ಇವರ ಪರ ಪ್ರಚಾರಕ್ಕೆ ಬರುತ್ತಿರುವುದರಿಂದ ಅಭ್ಯರ್ಥಿ ಬಸವರಾಜು ಅಂದ್ರೆ ಅವರಿಗೆ ಖುಷಿಯ ವಿಷಯವಾಗಿದೆ
ಕಿಕ್ಕಿರಿದು ಸೇರಲಿರುವ ಕಾರ್ಯಕರ್ತರು ಹಾಗೂ ಅಭಿಮಾನಿಗಳು..!: ಇಂದು ನಡೆಯಲಿರುವ ಕಿಚ್ಚ ಸುದೀಪ ಪ್ರಚಾರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಿಕ್ಕಿರಿದು ಸೇರಲಿದ್ದು ಅದು ಹುಂದ್ರಿಗೆ ಮತದಾನ ರೂಪದಲ್ಲಿ ವರದಾನವಾಗಲಿದೆ ಎಂದು ತಿಳಿಯಲಾಗಿದೆ.