ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರದ್ದು ಪ್ರಮುಖ ಪಾತ್ರ ಇದೆ: ಯುವ ನಾಯಕ ರಾಹುಲ್ ಜಾರಕಿಹೊಳಿ

ಖಾನಾಪುರ: ಖಾನಾಪುರ ತಾಲೂಕಿನ ದೇಸೂರ ಗ್ರಾಮದ ಗುಡ್ಸ್ ರೈಲ್ವೆ ಕಾರ್ಮಿಕರೊಂದಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದರು.
ಈ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು, ದೇಶ ಅದ್ಬುತವಾಗಿ ಬೆಳೆಯಲು ಕಾರ್ಮಿಕರ ಬಹುಪಾಲು ಇದೆ. ನಿಷ್ಠೆಯಿಂದ ಹಗಲಿರುಳು ಶ್ರಮಿಸುವ ಕಾಯಕ ಜೀವಿಗಳು. ಪ್ರತಿಹಂತದಲ್ಲಿ ಅವರನ್ನು ಸ್ಮರಿಸುವ ಕಾರ್ಯವಾಗಬೇಕಿದೆ. ನಾವೆಲ್ಲರೂ ಸೂರಿನಲ್ಲಿ ಜೀವನ ಸಾಗಿಸಲು ಕಾರ್ಮಿಕರ ಶ್ರಮ ಕಾರಣ, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮೇ 1 ರಂದು ಪ್ರತಿವರ್ಷ `ಅಂತಾರಾಷ್ಟ್ರೀಯ ಕಾರ್ಮಿಕರ ದಿನ’ವನ್ನು ಆಚರಿಸಲಾಗುತ್ತದೆ. ಇಂತಹ ಶ್ರಮಜೀವಿಗಳ ಪ್ರಯತ್ನ, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಕಾರ್ಮಿಕರ ಶ್ರಮ ಮತ್ತು ಸೇವೆಯನ್ನು ಸ್ಮರಿಸೋಣ ಎಂದು ಹೇಳಿದರು.//////