ಕಾರ್ಮಿಕರು ಶ್ರಮಜೀವಿಗಳು: ಪ್ರದೀಪ್ ಎಂ. ಜೆ

ಬೆಳಗಾವಿ: ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಕಾರ್ಮಿಕರ ದಿನಾಚರಣೆ ನಿಮಿತ್ತ ಇಬ್ಬರು ಕಾರ್ಮಿಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಈ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ. ಜೆ ಮಾತನಾಡಿ, ಕಾರ್ಮಿಕರು ಹಗಲಿರುಳು ಶ್ರಮಿಸಿ `ನಾಡಿಗೆ ಬೆಳಕು ಕೊಟ್ಟುವರು. ಕಾರ್ಮಿಕರ ಬೆವರಿನ ಹನಿಗಳ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಂಡು ಅವರಿಗೆ ಗೌರವಿಸುವ ಕಾರ್ಯವಾಗಬೇಕು ಎಂದರು.
ಜಾಗತೀಕರಣದ ಬಿರುಗಾಳಿಯಲ್ಲಿ ಕಂಗೆಟ್ಟು ಹೋಗಿರುವ ಅನೇಕ ಕಾರ್ಮಿಕ ಹೋರಾಟಗಳು ಹೊಸ ಹುಡುಕಾಟದಲ್ಲಿ ಇರುವಾಗಲೇ ಸಂಘಟಿತರು, ಅಸಂಘಟಿತರು ಒಂದಾಗಬೇಕು ಎಂಬ ಉದ್ಘೋಷದೊಂದಿಗೆ ಆಚರಿಸುವ ವಿಶ್ವ ಕಾರ್ಮಿಕ ದಿನಾಚರಣೆಗೆ ಈ ಸ್ಮಾರಕ ಸ್ಪೂರ್ತಿಯ ಚಿಲುಮೆಯಾಗಿ ನಿಂತಿದೆ.
ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನಾಚರಣೆ ನಡೆಯುವುದು. ಈ ನಾಡನ್ನು ಶ್ರೀಮಂತಗೊಳಿಸಿದವರು ಕಾರ್ಮಿಕರು, ಇಂತಹ ಶ್ರಮಜೀವಿಗಳನ್ನು ನಿತ್ಯವೂ ನಾವೆಲ್ಲರೂ ಗೌರವಿಸೋಣ ಎಂದು ಹೇಳಿದರು.
ಬಸವರಾಜ ಶಿಗ್ಗಾಂವಿ, ರಾಜಾ ಸಲೀಂ, ಇಮ್ರಾನ್ ತಪ್ಪಕೀರ್ ಶಖೀಲ್ ಮುಲ್ಲಾ , ಡಾ. ದಿನೇಶ ನಾಸಿಪುಡಿ, ಹಾಗೂ ಇತರರು ಇದ್ದರು.//////