Belagavi News In Kannada | News Belgaum

ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಿಂದ ವಿವಿಧ ಮತ ಕ್ಷೇತ್ರಕ್ಕೆ ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳಿಗೆ ಬಸ್ ಸೌಲಭ್ಯ

ಬೆಳಗಾವಿ:  ಕರ್ನಾಟಕ ವಿಧಾನಸಭೆಗೆ 2023 ರ ಸಾರ್ವತ್ರಿಕ ಚುನಾವಣೆ ಸಲುವಾಗಿ, ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಿಂದ ಅರಭಾವಿ, ಬೈಲಹೊಂಗಲ, ಗೋಕಾಕ, ಖಾನಾಪೂರ ಕಿತ್ತೂರ, ರಾಮದುರ್ಗ ಮತ್ತು ಸವದತ್ತಿ-ಯಲ್ಲಮ್ಮ ತರಬೇತಿ ಕೇಂದ್ರಗಳಿಗೆ ಮೇ.3 2023 ರಂದು ಬೆಳಗ್ಗೆ 5.30 ಕ್ಕೆ ವನಿತಾ ವಿದ್ಯಾಲಯ ಆಂಗ್ಲ ಮಾಧ್ಯಮ, ಪ್ರೌಢ ಶಾಲೆ, ಕ್ಲಬ್ ರೋಡ, ಬೆಳಗಾವಿಯಿಂದ ಬಸ್ಸುಗಳು ಹೊರಡುತ್ತಿದ್ದು, ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ರಾಜಶೇಖರ ಡಂಬಳ 13-ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////