Belagavi News In Kannada | News Belgaum

ಹಣ ಕೊಟ್ಟು ಜನ ಸೇರಿಸಿದ ಬಸವರಾಜ ಹುಂದ್ರಿ ಬಿಜೆಪಿ ಪ್ರಚಾರದ ಕಾರ್ಯಕ್ರಮದಲ್ಲಿ ಕಂತೆ ಕಂತೆ ಹಣ ಕೊಟ್ಟು ಜನಸಾಗರ

ಯಮಕನಮರಡಿ: ಹಣ ಕೊಟ್ಟು ಜನ ಸೇರಿಸಿದ ಬಸವರಾಜ ಹುಂದ್ರಿ ಬಿಜೆಪಿ ಪ್ರಚಾರದ ಕಾರ್ಯಕ್ರಮದಲ್ಲಿ ಕಂತೆ ಕಂತೆ ಹಣ ಕೊಟ್ಟು ಜನಸಾಗರ ಕೂಡಿಸಿದ ಬಸವರಾಜ ಹುಂದ್ರಿ ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಗ್ರಾಮದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಭಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದೆ.ಆದರೆ ಇಂದು ಬಸವರಾಜ ಹುಂದ್ರಿ ಬಿಜೆಪಿ ಪರ ಮತಯಾಚಿಸಲು ಬಸನಗೌಡ ಯತ್ನಾಳ ಹಾಗೂ ಈರಣ್ಣ ಕಡಾಡಿ ಹೀಗೆ ಹಲವು ಮುಖಂಡರು ಭಾಗವಹಿಸಿ ಅದ್ದೂರಿ ಪ್ರಚಾರ ನಡೆಸಿದ್ದರು ಆದರೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಿಜೆಪಿ ಜನರಿಗೆ ಕಂತೆ ಕಂತೆ ನೋಟುಗಳನ್ನು ಹಂಚುವ ವಿಡಿಯೋ ಇದೀಗ ವೈರಲ್ ಪ್ರತಿ ಜೀಪಗೆ ಮೂರುಸಾವಿರ ಹಣ,ಮತದಾರರಿಗೆ ಐದುನೂರು ರೂಪಾಯಿ ಹಣ ಕೊಡುವ ವಿಡಿಯೋಂದು ಪತ್ರಿಕೆಗೆ ಲಭ್ಯವಾಗಿದೆ.ಅಂತೂ ಇಂತೂ ಹಣ ಕೊಟ್ಟು ಜನರನ್ನ ಸೇರಿಸಿ ಬಿಜೆಪಿ ಪ್ರಚಾರ ನಡೆಸಿದೆ ಆದರೆ ಮತದಾರರಿಗೆ ಹಣದ ಆಮೀಷ ಒಡ್ಡಿ ಬಿಜೆಪಿ ಗೆಲುವು ಸಾಧಿಸಲು ರಣತಂತ್ರ ನಡೆಸಿದೆ.ಆದರೆ ಮತದಾರರಿಗೆ ಹಣ ಹಂಚುವ ವಿಡಿಯೋ ಆಧರಿಸಿ ಚುನಾವಣೆ ಇಲಾಖೆ ಪ್ರಕರಣ ದಾಖಲಿಸುತ್ತಾರೆಯೆ ಕಾದು ನೋಡಬೇಕಿದೆ.ಮುಕ್ತ ನಿರ್ಭಯ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಆದರೆ ಯಾವೂದೆ ಪಕ್ಷದ ಪ್ರಚಾರದಲ್ಲಿ ಚುನಾವಣೆ ವೀಕ್ಷಕರಿದ್ದರೂ ಕೂಡಾ ಕ್ಯಾರೆ ಎಂದಿಲ್ಲ ಚುನಾವಣಾಧಿಕಾರಿಗಳು.೫೦೦ ನೂರು ರೂಪಾಯಿಗಳಿಗೆ ಜನ ಹುಂದ್ರಿಗೆ ಜೈ ಅನ್ನುವದು ಸಹಜವಾಗಿದೆ ಆದರೆ ವಿರೋದ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೊಡಬೇಕಿದೆ.