40% ಎಂದರೆ ಡಬಲ್ ಇಂಜಿನ್ ಸರ್ಕಾರ ಎಂದರ್ಥ: ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್

ಬೆಳಗಾವಿ: ಭ್ರಷ್ಟಾಚಾರದಲ್ಲಿ ತೊಡಗಿದ ಡಬಲ್ ಇಂಜಿನ್ ಸರ್ಕಾರ ವನ್ನು ಇಂದು 40%ನಿಂದ ಗುರುತಿಸಲಾಗುತ್ತದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಆರೋಪಿಸಿದರು.
ನಗರದ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೊದಲ ಬಾರಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತಿದ್ದೇನೆ ಎಂದ ಅವರು, ಆರ್ಥಿಕ ಸುಧಾರಣಿಯಲ್ಲಿ ಕರ್ನಾಟಕ ಮಹತ್ವ ಪೂರ್ಣ ರಾಜ್ಯ ವಾಗಿದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸದೀಯ ಸ್ಥಾನನದಿಂದ ಅನರ್ಹ ಗೊಳಿಸಿ ಬಿಜೆಪಿ ಅದಾನಿ ಅಂತಹ ಶ್ರೀಮಂತರ ಪರವಾಗಿದೆ ಅಲ್ಲದೆ ಸರ್ಕಾರಿ ಉದ್ಯೋಗಗಳನ್ನು ಖಾಸಗೀಕರಣ ಗೊಳಿಸುವುದರ ಮೂಲಕ ಸರ್ಕಾರಿ ನೌಕರಿಯನ್ನು ಕಸಿದುಕೊಂಡಿದೆ ಎಂದು ಹೇಳಿದರು.
ನೋಟ್ ಬ್ಯಾನ್,ಜಿಎಸ್ ಟಿ,ಹಾಗೂ ಲಾಕ್ ಡೌನ್ ಹೇರುವುದರಿಂದ ಬಡವರ ಹೊರೆ ಹಾಕಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಈ ಬಾರಿ 130 ಅಧಿಕ ಕ್ಷೇತ್ರ ಗೆಲ್ಲುವ ಮೂಲಕ ಬಾರಿ ಬಹುಮತದಿಂದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದ ಅವರು, ಸಿದ್ದರಾಮಯ್ಯ ಅವದಿಯಲ್ಲಿ ನೀಡಲಾಗಿದ್ದ ಎಲ್ಲ ಯೋಜನೆಗಳನ್ನು ಮರಳಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ ಯಾವುದೇ ತೀರ್ಪು ಬಂದರು ಸಹ ಜನರು ಸಹಮತದಿಂದ ಸ್ವೀಕರಿಸಬೇಕು.ಈ ಬಾರಿ ಕಾಂಗ್ರೆಸ್ ಮತದಾನ ನೀಡುವ ಮೂಲಕ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯಾದರ್ಶಿ ಸುನಿಲ್ ಹನುಮಣ್ಣವರ್, ಸಲೀಮ್ ಕತೀಬ್ ಇತರರು ಇದ್ದರು./////