Belagavi News In Kannada | News Belgaum

ವಚನ ಕೇವಲ ಸಾಹಿತ್ಯ ಪ್ರಕಾರವಲ್ಲ: ಸಮಾಜೋಧಾರ್ಮಿಕ ಚಳವಳಿಯ ಮಾಧ್ಯಮ ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ ಅಭಿಪ್ರಾಯ

ಬೆಳಗಾವಿ: ವಚನ ಕೇವಲ ಮಾತು ಅಥವಾ ಸಾಹಿತ್ಯ ಪ್ರಕಾರವಲ್ಲ. ಅದೊಂದು ಚಳವಳಿಯಮಾಧ್ಯಮ. ನಡೆ- ನುಡಿಗಳ ಸಮಾಗಮ ಎಂದು ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ ಹೇಳಿದರು.ಅವರು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕ
ಸಹಯೋಗದಲ್ಲಿ ಇಲ್ಲಿನ ಶಿವಬಸವನಗರದ ಪ್ರಭುದೇವ ಸಭಾಗ್ರಹದ ಸಭಾಂಗಣದಲ್ಲಿ ಬಸವಜಯಂತಿ ನಿಮಿತ್ತ ಆಯೋಜಿಸಿದ್ದ ಬಸವತತ್ವ ಸಮಾವೇಶದಲ್ಲಿ ಉಪನ್ಯಾಸ ನೀಡಿದರು.
“12ನೇ ಶತಮಾನದಲ್ಲಿ ಕರ್ನಾಟಕದ ಕಲ್ಯಾಣದಲ್ಲಿ ನಡೆದಿದ್ದು ಮಾನವೋದ್ಧಾರದ ಮಹಾಕ್ರಾಂತಿ.ಅದು ಸರ್ವ ಸಮಾನತೆಯ ಸುಂದರ ಸಮಾಜ ನಿರ್ಮಾಣದ ಉದ್ದೇಶದಿಂದ ನಡೆದ ಜಗತ್ತಿನ ಮೊದಲಸಮಾಜೋಧಾರ್ಮಿಕ ಸಮಗ್ರ ಕ್ರಾಂತಿ. ಅದಕ್ಕೆ ಮಾಧ್ಯಮವಾದದ್ದು ವಚನ ಸಾಹಿತ್ಯ.ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಇವುಗಳ ತಳಹದಿಯ ಮೇಲೆ ಸುಂದರ ಸಮಾಜನಿರ್ಮಾಣ ಅದರ ಉದ್ದೇಶವಾಗಿದೆ” ಎಂದು ಅವರು ಹೇಳಿದರು.
“ಕೇವಲ ಮಾತನಾಡಿದರೆ ಉಪಯೋಗವಿಲ್ಲ. ಮಾತಿಗೆ ಮೌಲ್ಯ ಬರಬೇಕಾದರೆ ಅದು ನಡೆಯಲ್ಲಿಬರಬೇಕು ಎಂಬುದೇ ವಚನಗಳ ಸಾರ. ಲಿಂಗಸಾಕ್ಷಿ, ಮನಸಾಕ್ಷಿ, ಆತ್ಮಸಾಕ್ಷಿ ಅದರಲ್ಲಿರಬೇಕು. ಎಂದು ಅವರು ಹೇಳಿದರು.ಇದೇ ವೇಳೆ ಕರ್ನಾಟಕ ಸರಕಾರದಿಂದ ‘ಬಸವಶ್ರೀ’ ಪ್ರಶಸ್ತಿಗೆ ಭಾಜನರಾಗಿರುವ ಡಾ. ವೀರಣ್ಣರಾಜೂರ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಅಭಿನಂದನಾ ನುಡಿಗಳನ್ನಾಡಿದ ಡಾ. ಬಸವರಾಜ ಜಗಜಂಪಿ ಮಾತನಾಡಿ, ಸರಳ, ಸಜ್ಜನಿಕೆಗಳಿಗೆ ಭಾಷ್ಯಬರೆದವರು ಎಂದು ಪ್ರಶಸಂಸಿಸಿದರಲ್ಲದೆ, 1970ರಿಂದ ಅವರ ಒಡನಾಟ ಸ್ಮರಿಸಿದ ಜಗಜಂಪಿಯವರು,ಕನ್ನಡ ಸಾಹಿತ್ಯದ ಸದ್ದಿಲ್ಲದ ಸಾಧಕರಾದ ವೀರಣ್ಣ ರಾಜೂರ, ಸಾಮಾನ್ಯ ಮೊಘಲಾಯಿ ಹಳ್ಳಿಯಿಂದಬಂದು ಸಾಹಿತ್ಯ, ಸಂಶೋಧನೆಯಲ್ಲಿ ಅಗಾಧ ಸಾಧನೆ ಮಾಡಿದವರು. ಅವರು ಎಂದೂ ಪ್ರಚಾರದ ಬೆನ್ನುಬಿದ್ದವರಲ್ಲ. ಡಾ. ಎಂ.ಎಂ. ಕಲಬುರಗಿ ಅವರ ಸಮರ್ಥ ಉತ್ತರಾಧಿಕಾರಿಯಾಗಿದ್ದಾರೆ. ನಿರಂತರ ಓದು, ಅಧ್ಯಾಪನ, ಸಂಶೋಧನೆ, ಪ್ರಕಟಣೆ ಈ ಎಲ್ಲ ಮಗ್ಗಲುಗಳಿಂದ ಪರಿಪೂರ್ಣ ಸಾಹಿತಿ,ಸಾಧಕರಾಗಿರುವವರು ಅವರು. ಕನ್ನಡದ ಎಲ್ಲ ಪ್ರಕಾರಗಳಲ್ಲಿ ಅವರು ಕೃಷಿ ಮಾಡಿದವರುಎಂದು ಶ್ಲಾಘಿಸಿದರು. ವಿಶ್ರಾಂತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ
ಜಾಮದಾರ್ ಮಾತನಾಡಿದರು. ನ್ಯಾಯವಾದಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ
ವಹಿಸಿದ್ದರು.ಶ್ರೀ ಶಿವಾನಂದ ಮಹಾಸ್ವಾಮಿಗಳು ಹಂದಿಗುಂದ ನಾಗನೂರು ಮಠದ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ ವೇದಿಕೆಯಲ್ಲಿದ್ದರು.ನಿವೃತ್ತ ಪ್ರಾಚಾರ್ಯ ಡಾ. ಸಿ.ಕೆ. ನಾವಲಗಿ ಪರಿಚಯಿಸಿದರು. ನಯನಾ ಗಿರಿಗೌಡರ್ ತಂಡದವರು ಪ್ರಾರ್ಥಿಸಿದರು. ಮುರಿಗೆಪ್ಪಾ ಬಾಳಿ ಸ್ವಾಗತಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ನಗರಘಟಕಾಧ್ಯಕ್ಷ ಎಸ್.ಜಿ. ಸಿದ್ನಾಳ ವಂದಿಸಿದರು.ಜಾಗತಿಕ ಲಿಂಗಾಯತ ಜಿಲ್ಲಾ ಪ್ರದಾನಕಾರ್ಯದರ್ಶಿ ಅಶೋಕ ಮಳಗಲಿ ನಿರೂಪಿಸಿದರು.//////