105 ಫಿಜಿಯೋ ಥೆರಪಿ ಪದವಿಧರ ವಿಧ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ

ಬೆಳಗಾವಿ : ಕೆ.ಎಲ್.ಇ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕೆಹರ್ ಗೌರವಾನ್ವಿತ ಉಪ ಕುಲಪತಿಗಳಾದ ಡಾ.ನಿತಿನ್ ಎಂ.ಗಂಗನೆ ಅವರು ಬಡವರಿಗೆ ಸೇವೆ ಸಲ್ಲಿಸುವಾಗ ಹೊಸತನದಿಂದ ಯೋಚಿಸುವ ಜೊತೆಗೆ ತಮ್ಮನ್ನು ತಾವು ಆಗಾಗ ನವೀಕರಿಸಿಕೊಳ್ಳುತ್ತಿರಬೇಕು ಎಂದು ಸಲಹೆ ನೀಡಿದರು.
ಅವರು ಇದೆ ಎಪ್ರೀಲ್ 26 ರಂದು ಬೆಳಗಾವಿ ಕೆ.ಎಲ್.ಇ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಹಮ್ಮಿಕೊಂಡ ಫಿಜಿಯೋ ಥೆರಪಿ ಪದವಿಧರ ವಿಧ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಫಿಸಿಯೋಥೆರಪಿ ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಈ ಹಿನ್ನೆಲೆಯಲ್ಲಿ ಪದವೀಧರರು ಭವಿಷ್ಯದ ಸವಾಲುಗಳನ್ನು ಸ್ವೀಕರಿಸಲು ತಮ್ಮನ್ನು ತಾವು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳಲು ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮತ್ತೊರ್ವ ಅತಿಥಿಗಳಾದ ಡಾ.ಎಪಿಜೆ ಅಬ್ದುಲ್ ಕಲಾಂ ಕಾಲೇಜ ಆಫ್ ಫಿಸಿಯೋಥೆರಪಿ. ಪಮ್ಸ್, ಲೋಣಿ ಪ್ರಾಂಶುಪಾಲರಾದ ಡಾ.ರಾಕೇಶ ಕುಮಾರ್ ಸಿನ್ಹಾ, ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಯೋಜನೆಗಳು ಮತ್ತು ಗುರಿಗಳಲ್ಲಿ ಪೂರ್ವಭಾವಿಯಾಗಿ ಮತ್ತು ನಿರ್ಣಾಯಕವಾಗಿರಬೇಕು. ಹಾಗೂ ವೃತ್ತಿಪರ ಪ್ರತಿಜ್ಞೆ ಪ್ರಜ್ಞೆ ಜಾಗೃತವಾಗಿರಬೇಕು ಎಂದು ಸಲಹೆ ನೀಡಿದರು.
ಕೆ.ಎಲ್.ಇ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಬೆಳಗಾವಿಯ ಫಿಸಿಯೋಥೆರಪಿ ಪದವಿ ಪಡೆದ 24ನೇ ಬ್ಯಾಚ ಇದಾಗಿದ್ದು ಒಟ್ಟು 105 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
ಫಿಜಿಯೋ ಥೆರಪಿ ಪದವಿಧರ ವಿಧ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳ ಪೋಷಕರು, ಫಿಸಿಯೋಥೆರಪಿ ಡೀನ್ ಅಧ್ಯಾಪಕರಾದ ಡಾ.ದೀಪಾ ಮೆಟಗುಡ್, ಉಪ ಪ್ರಾಂಶುಪಾಲರಾದ ಡಾ.ವಿಜಯ ಕಾಗೆ ಮತ್ತು ಪ್ರಾಂಶುಪಾಲರಾದ ಡಾ.ಸಂಜೀವಕುಮಾರ ಮುಂತಾದವರು ಉಪಸ್ಥಿತರಿದ್ದರು.//////