Belagavi News In Kannada | News Belgaum

ಯಮಕನಮರಡಿಯಲ್ಲಿ ರಾಹುಲ್ ಜಾರಕಿಹೊಳಿ ತಂದೆ ಪರವಾಗಿ ಮತಯಾಚಿಸಿದರು

ಬೆಳಗಾವಿ:  ಯುವ ಸಾಮ್ರಾಟ್  ರಾಹುಲ್  ಜಾರಕಿಹೊಳಿ ಅವರು ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಪಾಶ್ಚಾಪೂರ ಜಿ.ಪಂ ವ್ಯಾಪ್ತಿಯಲ್ಲಿ ಬರುವ ಅರಳಿಕಟ್ಟಿ, ಕರಗುಪ್ಪಿ. ಯಲ್ಲಾಪೂರ.ಹಗೇದಾಳ.ಶಿರೂರ.ಹಾಗೂ ಬಸ್ಸಾಪೂರ ಗ್ರಾಮಗಳಲ್ಲಿ ಪ್ರಚಾರ ರ್ಯಾಲಿ ನಡೆಸಿ ಮೇ 10 ರಂದು ಜರುಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿಗೆ ಮತ ನೀಡುವ ಮೂಲಕ ಸತೀಶ ಅಣ್ಣಾ ಜಾರಕಿಹೊಳಿ ಅವರನ್ನು ಮತ್ತೆ ಆರಿಸಿ ತರಬೇಕು ಎಂದು
ಕಾಂಗ್ರೆಸ್ ಜನಪರ ಕಾಳಜಿಯೊಂದಿಗೆ ಆರು ಗ್ಯಾರಂಟಿಗಳನ್ನು ಘೋಷಿಸಿದ್ದು, ಈ ಗ್ಯಾರಂಟಿಗಳಿಂದ ಜನಸಾಮಾನ್ಯರ ಬದುಕು ಹಸನಾಗಲಿದೆ. ಇದು ಜನರಿಗೆ ಕಾಂಗ್ರೆಸ್ ನೀಡುವ ದಿಟ್ಟ ಭರವಸೆ. ಯಮಕನಮರಡಿ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿರುವ ಸತೀಶ  ಜಾರಕಿಹೊಳಿ ಅವರು, ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.

ಇಂತಹ ಜನಾನುರಾಗಿ ನಾಯಕ ಈ ಕ್ಷೇತ್ರದಲ್ಲಿ ಮತ್ತೆ ಗೆಲ್ಲಬೇಕು. ಹಾಗಾಗಿ ಅವರ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟು ಅವರಿಗೆ ಅತ್ಯಂತ ಅಧಿಕ ಮತಗಳಿಂದ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು .

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ  ಮಂಜುಗೌಡ ಪಾಟೀಲ.ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್ ಟಿ ಅಧ್ಯಕ್ಷರಾದ  ಬಾಳೇಶ ದಾಸನಟ್ಟಿ.ಹಾಗೂ ಬಸವರಾಜ ಡುಮ್ಮನಾಯಿಕ.ಯಮಕನಮರಡಿ ಎಸ್ ಟಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮಾರುತಿ ಕುದರಿ.ಹಾಗೂ ಆಯಾ ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರ ಸದಸ್ಯರು ಮತ್ತು ಇನ್ನಿತರ ಕಾಂಗ್ರೆಸ್ ಮುಖಂಡರು ಹಾಗೂ ಮತದಾರರು ಕಾರ್ಯಕರ್ತರು ಉಪಸ್ಥಿತರಿದ್ದರು